ಮೈಸೂರು ದಸರಾ: ಅರಮನೆ ಪ್ರವೇಶಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾಡಳಿತದಿಂದ ಸ್ವಾಗತ…

ಮೈಸೂರು,ಅಕ್ಟೋಬರ್,2,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು  ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಗೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾಡಳಿತದ ವತಿಯಿಂದ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.Mysore Dasara -Captain –Abhimanyu-gajapade- palace- welcome- minister- ST somashekar

ಅರಮನೆ ಪ್ರವೇಶಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಜಯಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸಿ  ಸ್ವಾಗತ ಕೋರಲಾಯಿತು.  ಸ್ವಾಗತ ಕೋರಿದ ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಮೊದಲ ಬಾರಿಗೆ ಪೂಜೆ ಸಲ್ಲಿಸುತ್ತಿರುವುದು ಸಂತಸ ವಾಗುತ್ತಿದೆ. ಜಿಲ್ಲಾಡಳಿತ ಹಾಗೂ ಎಲ್ಲಾ ಶಾಸಕರು ಸಂತೋಷದಿಂದ ಪೂಜೆ ಸಲ್ಲಿಸಿ ಗಜಪಡೆ ಬರಮಾಡಿಕೊಂಡಿದ್ದೇವೆ ಎಂದರು.

ಜಂಬೂಸವಾರಿಗೆ 2ಸಾವಿರ ಜನರಿಗೆ ಅನುಮತಿಗೆ ಮನವಿ ಮಾಡಿದ್ದೇವೆ. ಚಾಮುಂಡಿ ಬೆಟ್ಟದ ಉದ್ಘಾಟನಾ  ಕಾರ್ಯಕ್ರಮಕ್ಕೆ 250 ಜನ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1 ಸಾವಿರ ಜನ  ಹಾಗೂ ವಿಜಯ ದಶಮಿ ಕಾರ್ಯಕ್ರಮಕ್ಕೆ  2000 ಜನರಿಗೆ ಅವಕಾಶ ಕಲ್ಪಿಸಲು ಮನವಿ ಮಾಡಿದ್ದೇವೆ. ಜಿಲ್ಲಾಡಳಿತ ಎಲ್ಲಾ ರೀತಿಯ ನಿಯಮ ಪಾಲನೆ ಮಾಡಲಿದೆ.  ಸಾಂಸ್ಕೃತಿಕ ಕಾರ್ಯಕ್ರಮ ಪಟ್ಟಿ ಎರಡು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.Mysore Dasara -Captain –Abhimanyu-gajapade- palace- welcome- minister- ST somashekar

ನಿನ್ನೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ನಂತರ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಂಡ ಮೈಸೂರಿನ ಅರಣ್ಯ ಭವನಗೆ ಆಗಮಿಸಿ ಅಲ್ಲೇ ಬೀಡುಬಿಟ್ಟಿದ್ದವು. ಇದೀಗ ಅರಣ್ಯಭವನದಿಂದ ಅಭಿಮನ್ಯು ಅಂಡ್ ಟೀಮ್ ನೇರವಾಗಿ ಲಾರಿಗಳ ಮೂಲಕ ಅರಮನೆಗೆ ಆಗಮಿಸಿದವು.

Key words: Mysore Dasara -Captain –Abhimanyu-gajapade- palace- welcome- minister- ST somashekar