ಐಪಿಎಲ್: ಸನ್‌ರೈಸರ್ಸ್ ಹೈದಬಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಯಾರಿಗೆ ಶುಭ ಶುಕ್ರವಾರ ?!

ಅಬುದಾಭಿ, ಅಕ್ಟೋಬರ್ 02, 2020 (www.justkannada.in):
ಸನ್‌ರೈಸರ್ಸ್ ಹೈದಬಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶುಕ್ರವಾರ ಮುಖಾಮುಖಿಯಾಗುತ್ತಿದೆ.

ಈ ಎರಡು ತಂಡಗಳು ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಸೋಲು ಹಾಗೂ ಒಂದು ಗೆಲುವನ್ನು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳನ್ನು ಈ ಎರಡು ತಂಡಗಳು ಪಡೆದುಕೊಂಡಿದೆ.

7 ದಿನಗಳ ವಿಶ್ರಾಂತಿ ಬಳಿಕ ಶುಕ್ರವಾರ ಕಣಕ್ಕಿಳಿ ಯಲಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅಂಬಟಿ ರಾಯುಡು ಹಾಗೂ ಡ್ವೇನ್ ಬ್ರಾವೋ ಬಲ ತುಂಬಲಿದ್ದಾರೆ. ಇಬ್ಬರೂ ಗಾಯದಿಂದ ಚೇತರಿಸಿಕೊಂಡಿದ್ದು ಸನ್‌ರೈಸರ್‌ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿದ್ದಾರೆ.

ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಎರಡು ತಂಡಗಳಿಗೂ ಕೂಡ ಅಂಕಪಟ್ಟಿಯಲ್ಲಿ ಸ್ಥಾನವನ್ನು ಉತ್ತಮಪಡಿಸಿಕೊಳ್ಳುವ ಅವಕಾಶವಿದೆ. ಹಾಗಾದಿ ಈ ಕಾದಾಟದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಈಗ ಕುತೂಹಲವನ್ನು ಮೂಡಿಸಿದೆ.

ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವನ್ನು ಕಂಡಿದ್ದು ಇಂದಿನ ಪಂದ್ಯದಲ್ಲೂ ಮೇಲುಗೈ ಸಾಧಿಸುವ ಉತ್ಸಾಹದಲ್ಲಿದೆ.