ಚುನಾವಣೆ ವ್ಯವಸ್ಥೆ ಬದಲಿಗೆ ವಾಟಾಳ್ ನಾಗರಾಜ್ ಹೊಸಸೂತ್ರ…

ರಾಮನಗರ, ಅಕ್ಟೋಬರ್,2,2020(www.justkannada.in): ದೇಶದ ಚುನಾವಣೆ ವ್ಯವಸ್ಥೆ ಬದಲಾವಣೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೊಸಸೂತ್ರ ನೀಡಿದ್ದಾರೆ. ಚುನಾವಣಾ ವ್ಯವಸ್ಥೆ ಬದಲಾಗಬೇಕು. ಐದು ಕೋಟಿಗೂ ಹೆಚ್ಚಾಗಿ ಹಣ ಹೊಂದಿರುವವರು ಚುನಾವಣೆಗೆ ನಿಲ್ಲಬಾರದೆಂದು ವಾಟಾಳ್ ನಾಗರಾಜು ಹೇಳಿದ್ದಾರೆ.ramanagar-kannada-fighter-vatal-nagaraj-instead-election-system

ರಾಮನಗರದ ಐಜೂರು ವೃತ್ತದ ಬಳಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್  ಅವರ ನೇತೃತ್ವದಲ್ಲಿ  ಮಹಾತ್ಮ ಗಾಂಧೀಜಿಯವರ ಜಯಂತಿ ಆಚರಿಸಲಾಯಿತು. ಹಳದಿ ಲೋಹದ ರಥದಲ್ಲಿ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದ ವಾಟಾಳ್ ನಾಗರಾಜ್  ಅವರು ಗಾಂಧೀಜಿಯವರ ಕಲ್ಪನೆಯ ವ್ಯವಸ್ಥೆಯನ್ನ ನೆನೆದರು.

ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ ಮಾತನಾಡಿದ ವಾಟಾಳ್ ನಾಗರಾಜ್ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು. ಹಾಗಯೇ ರಾಹುಲ್ ಗಾಂಧಿಯವರ ಮೇಲಿನ ಹಲ್ಲೆ ಖಂಡಿಸಿದ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ramanagar-kannada-fighter-vatal-nagaraj-instead-election-system

ಇದೇ ವೇಳೆ ದೇಶದ ಚುನಾವಣಾ ವ್ಯವಸ್ಥೆ ಬದಲಾವಣೆಗೆ ಒತ್ತಾಯಿಸಿದ ವಾಟಾಳ್ ನಾಗರಾಜ್, ಚುನಾವಣಾ ವ್ಯವಸ್ಥೆ ಬದಲಾಗಬೇಕು. ಐದು ಕೋಟಿಗೂ ಹೆಚ್ಚಾಗಿ ಹಣ ಹೊಂದಿರುವವರು ಚುನಾವಣೆಗೆ ನಿಲ್ಲಬಾರದು ಎಂದು ಹೊಸ ನಿಯಮವನ್ನ ತರಬೇಕೆಂದು ಹೇಳಿದರು.

Key words: ramanagar- kannada fighter- Vatal Nagaraj- instead – election -system.