ಮೈಸೂರು ದಸರಾ ಸಾಂಪ್ರದಾಯಿಕವಾಗಷ್ಟೇ ಆಚರಿಸಿ-ಸಿಎಂಗೆ ಪತ್ರ ಬರೆದು ಸುಧಾಕರ್  ಎಸ್  ಶೆಟ್ಟಿ ಮನವಿ…

ಮೈಸೂರು,ಅಕ್ಟೋಬರ್,11,2020(www.justkannada.in):   ರಾಜ್ಯದಲ್ಲಿ ಕೊರೋನಾ ಹರಡುತ್ತಿರುವ ಹಿನ್ನೆಲೆ ಈ ಬಾರಿ ಮೈಸೂರು ದಸರಾ ಮಹೋತ್ಸವವನ್ನ ಸಾಂಪ್ರದಾಯಿಕವಾಗಷ್ಟೇ ಆಚರಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)  ಮಾಜಿ ಅಧ್ಯಕ್ಷ ಸುಧಾಕರ್  ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.jk-logo-justkannada-logo

ಈ ಕುರಿತು ಸಿಎಂಗೆ ಪತ್ರ ಬರೆದಿರುವ ಎಫ್ ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್  ಎಸ್  ಶೆಟ್ಟಿ,  ಮೈಸೂರು  ನಗರವು ಪ್ರವಾಸಿ  ಕೇಂದ್ರವಾಗಿದ್ದು  ಪ್ರತಿ ವರ್ಷವೂ ಸುಮಾರು 60 ಲಕ್ಷ ಪ್ರವಾಸಿಗರು  ಮೈಸೂರಿಗೆ ಬಂದು ಮೈಸೂರಿನ  ಪ್ರವಾಸಿ ತಾಣಗಳಿಗೆ  ಭೇಟಿ ನೀಡುತ್ತಿದ್ದರು.ಅದರಲ್ಲೂ ದಸರಾ ಹಬ್ಬವು ಹೊರದೇಶದ ಪ್ರವಾಸಿಗರು ಹಾಗೂ ಮೈಸರಿನ ಸುತ್ತಮುತ್ತಲಿನ ಗ್ರಾಮದ ಜಿಲ್ಲೆಗಳ ಜನರನ್ನು ಆಕರ್ಷಿಸುವ ನಾಡಹಬ್ಬ.ದುರದೃಷ್ಟವಶಾತ್ ಕರೋನವೈರಸ್ ಪ್ರಪಂಚದಾದ್ಯಂತ ಬರಸಿಡಿಲಿನಂತೆ ಬಡಿದು ಪ್ರಪಂಚ ಮತ್ತು ಭಾರತ ದೇಶದ ಜನರನ್ನು ಅಲ್ಲೋಲ ಕಲ್ಲೋಲವಾಗಿಸಿದೆ.

ಇಂದು ಮೈಸೂರು ನಗರವು ಕರ್ನಾಟಕದಲ್ಲಿ ಅತಿ ಹೆಚ್ಚಿನ ಕರೋನವೈರಸ್ ರೋಗಿಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಪ್ರತಿನಿತ್ಯವೂ  ಸರಾಸರಿ 300 ರಿಂದ 1500 ರವರೆಗೆ ಕರೋನವೈರಸ್ ಸಾಮಾನ್ಯ ಜನಗಳ ಜೀವವನ್ನು ಪ್ರವೇಶಿತ್ತಿದೆ.ಅದರಲ್ಲೂ ದಸರಾ ಹಬ್ಬವೇನಾದರೂ ನಡೆದರೆ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಧರಿಸುವುದುದನ್ನಾಗಲಿ, ಸ್ವಚ್ಛತೆನ್ನಾಗಲಿ ಕಾಪಾಡಿಕೊಳ್ಳುವುದು ಖಂಡಿತ ದುಸ್ತರ .ಈ ಸಮಯದಲ್ಲಿ ದಸರಾ ಎನ್ನುವುದು  ಕರೋನಾ ಹರಡುವ ಹಬ್ಬವಾಗದಂತೆ ಹಾಗೂ ಮೈಸೂರು ಜಿಲ್ಲೆಯ ಜನರನ್ನು ಮಹಾಮಾರಿಯಿಂದ ಕಾಪಾಡುವಲ್ಲಿ ಸರ್ಕಾರವು ಈ ವರ್ಷ ಮೈಸೂರು ದಸರಾ ಹಬ್ಬವನ್ನು ಆಚರಿಸದೇ ಇರುವುದು ಸೂಕ್ತ ಎಂದು ಸುಧಾಕರ್  ಎಸ್  ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.mysore-dasara-2020-traditional-dasara-fkcci-former-president-sudhakar-s-shetty

ಶಾಸ್ತ್ರ ಸಂಪ್ರದಾಯಗಳಂತೆ ದಸರಾ ಹಬ್ಬವು ಕೇವಲ ಅರಮನೆಯ ಆವರಣದೊಳಗೆ  ನಡೆಯಲಿ ಯಾರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದರೆ ಜನರ ಆರೋಗ್ಯಕ್ಕೆ ಸರ್ಕಾರವು ನೀಡುವ ಬಹುದೊಡ್ಡ ಕೊಡುಗೆ ಯಾಗುವುದು. ಈ ಎಲ್ಲಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಷ್ಟೇ ಆಚರಿಸಬೇಕು ಎಂದು ಸುಧಾಕರ್  ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.

Key words: mysore dasara-2020-traditional dasara- FKCCIformer presidentSudhakar S Shetty