ಸಿದ್ಧರಾಮಯ್ಯನವರಿಗಿದ್ದ ಟಿಪ್ಪು ಪ್ರೇಮ ಖಂಡಿಸಿದ್ಧೇನೆ – ಎಫ್ ಐಆರ್ ಕುರಿತು ಅಶ್ವಥ್ ನಾರಾಯಣ್ ಕಿಡಿ..

ಬೆಂಗಳೂರು,ಮೇ,25,2023(www.justkannada.in): ಸಿದ್ಧರಾಮಯ್ಯ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಎಫ್ ಐಆರ್ ದಾಖಲು ಮಾಡಿರುವ ಕುರಿತು ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅಶ್ವಥ್ ನಾರಾಯಣ್, ಕಾಂಗ್ರೆಸ್ ಸರ್ಕಾರದ್ವೇಷದ ರಾಜಕಾರಣ ಮಾಡುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು  ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದೆ. ಮುಗಿದು ಹೋಗಿ ರುವ ವಿಷಯಕ್ಕೆ ಕೇಸ್ ಹಾಕಿದ್ದಾರೆ.  ಸಿದ್ಧರಾಮಯ್ಯ ಅವರಿಗೆ ಇದ್ದ ಟಿಪ್ಪು ಪ್ರೇಮ ಖಂಡಿಸಿದ್ದೇನೆ. ಕಾಂಗ್ರೆಸ್ ಸೋಲಿಸಬೇಕು ಎಂಬ ಚಿಂತನೆಯಲ್ಲಿ ಹೇಳಿದ್ದೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ಮೇಲೆ ಗೌರವವಿದೆ. ಇದನ್ನ ರಾಜಕೀಯವಾಗಿ ಕಾನೂನಾತ್ಮಕವಾಗಿ ಎದುರಿಸುವೆ. ಇದಕ್ಕೆಲ್ಲಾ ಭಯ ಪಡುವ ಮಾತೇ ಇಲ್ಲ ಎಂದರು.

ಕಾಂಗ್ರೆಸ್ ನವರು ಸಮಯವನ್ನ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮೊದಲು ಕಾಂಗ್ರೆಸ್ ನವರು ಗ್ಯಾರಂಟಿ ಬಗ್ಗೆ ಯೋಚಿಸಲಿ.  ಗ್ಯಾರಂಟಿ ಜಾರಿ ಮಾಡದೇ ದ್ವೇಷದ ರಾಜಕಾರಣ  ಮಾಡುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.

Key words: Siddaramaiah -Ashwath Narayan- FIR