ರಾಷ್ಟ್ರದ 2022ನೇ ಸಾಲಿನ 7ನೇ ಶ್ರೇಷ್ಠ ವಾಸ್ತುಶಿಲ್ಪ ಕಾಲೇಜು ಎಂದು ಸ್ಥಾನ ಪಡೆದ ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆ.

ಮೈಸೂರು,ಜು,6,2022(www.justkannada.in): ಇಂಡಿಯಾ ಟುಡೇ ಸರ್ವೆ ಪ್ರಕಾರ, ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆಯು ರಾಷ್ಟ್ರಮಟ್ಟದ 2022ನೇ 7ನೇ ಶ್ರೇಷ್ಠ ವಾಸ್ತುಶಿಲ್ಪ ಕಾಲೇಜು ಎಂದು ಸ್ಥಾನ ಪಡೆದಿದೆ. ಕರ್ನಾಟಕ ರಾಜ್ಯದಲ್ಲಿ ಸಂಸ್ಥೆಯು ಅತೀ ಶ್ರೇಷ್ಠ ವಾಸ್ತುಶಿಲ್ಪ ಕಾಲೇಜು ಎಂಬ ಮೊದಲನೇಯ ಸ್ಥಾನದಲ್ಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿರುವ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಅತೀ ಹೆಚ್ಚು ಪ್ರಚಾರವಾಗಿರುವ ವಾರದ ಸುದ್ದಿ ಪತ್ರಿಕೆ ಇಂಡಿಯಾ ಟುಡೇ ಇವರು ಎಂಡಿರ್‌ಎ (ಮಾರ್ಕೆಟಿಂಗ್‌ ಅಂಡ್ ಡೆವೆಲಪ್ಟೆಂಟ್ ರಿಸರ್ಚ್ ಅಸೋಸಿಯೇಟ್ಸ್) ರವರ ಸಹಯೋಗದೊಂದಿಗೆ “ಇಂಡಿಯಾ ಟುಡೇ ಗ್ರೂಪ್ ಎಂಡಿಆ‌ಎ ಬೆಸ್ಟ್ ಕಾಲೇಜಸ್ ಬ್ಯಾಂಕಿಂಗ್ 20227. ಅನ್ನು ನಡೆಸಿರುತ್ತಾರೆ. ಈ ಸರ್ವೇಯು ಮಾನದಂಡವನ್ನು ಹೊಂದಿಸಿ ಅತ್ಯುತ್ತಮ ಶಿಕ್ಷಣವನ್ನು ನೀಡುವ ಸಂಸ್ಥೆಯನ್ನು ಗುರುತಿಸುವ ಪ್ರಯತ್ನವಾಗಿದ್ದು ಇಂಡಿಯಾ ಟುಡೇ ಶ್ರೇಯಾಂಕದ ಪ್ರಕಾರ ಐಐಟಿ ರೂರ್ಕೀ ಸಂಸ್ಥೆಯು ಮೊದಲನೇಯದಾಗಿದ್ದು, ಎಸ್‌ಪಿಎ, ನವದೆಹಲಿ ಸಂಸ್ಥೆಯು 2ನೇ ಸ್ಥಾನ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಸಂಸ್ಥೆಗೆ 7ನೇ ಶ್ರೇಯಾಂಕ ನೀಡಿದೆ. ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಸಂಸ್ಥೆಗೆ 2021- 22 ನೇ ಸಾಲಿನಲ್ಲಿಯೂ ಸಹ 7ನೇ ಶ್ರೇಯಾಂಕ ನೀಡಿದ್ದಾರೆ.

ಗ್ಲೋಬಲ್ ಹ್ಯೂಮನ್ ರಿಸೋರ್ಸ್ ಡೆವೆಲಪ್ಮೆಂಟ್ ಸೆಂಟರ್ (ಜಿ.ಎಚ್.ಆರ್.ಡಿ.ಸಿ), ನವದೆಹಲಿ ರವರಿಂದ ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆಯು 2022ನೇ ವರ್ಷದ ಸೂಪರ್ ಎಕ್ಸಲೆನ್ಸ್ ಇನ್ ಇಂಡಿಯಾದಡಿಯಲ್ಲಿ 6ನೇ ಉನ್ನತ ವಾಸ್ತುಶಿಲ್ಪ ಕಾಲೇಜು ಮತ್ತು ದಕ್ಷಿಣ ಪ್ರಾದೇಶಿಕ ವಲಯದಲ್ಲಿ 3ನೇ ಉನ್ನತ ವಾಸ್ತುಶಿಲ್ಪ ಕಾಲೇಜು ಎಂಬ ಸ್ಥಾನಗಳನ್ನು ಪಡೆದಿದೆ.

ಮೈಸೂರು ವಿಶ್ವವಿದ್ಯಾನಿಲಯವು ಬಿ.ಆರ್ಕ್ ಮತ್ತು ಎಂ.ಆರ್ಕ್ (ಅರ್ಬನ್ ಡಿಸೈನ್) ಕೋರ್ಸುಗಳನ್ನು 2002 ರಲ್ಲಿ ಪ್ರಾರಂಭಿಸಿದ್ದು, 2022-23ರಲ್ಲಿ ಪಿ.ಎಚ್‌ಡಿ ಪದವಿಯನ್ನು ಆರ್ಕಿಟೆಕ್ಟರ್‌ ನಲ್ಲಿ ಪ್ರಾರಂಭಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಕೌನ್ಸಿಲ್ ಆಫ್ ಆರ್ಕಿಟೆಕ್ಟರ್ ನವದೆಹಲಿರವರು ಸ್ಥಾಪಿಸಿರುವ ನ್ಯಾಷನಲ್ ಬೆಸ್ಟ್ ಥೀಸೀಸ್ ಅವಾರ್ಡ್ಸ್ ಮತ್ತು ಐಟಿಪಿಐ, ನವದೆಹಲಿರವರು ಸ್ಥಾಪಿಸಿರುವ ಪ್ರೊ. ವಿ. ಎನ್ ಪ್ರಸಾದ ಬೆಸ್ಟ್ ಥೀಸೀಸ್ ಅವಾರ್ಡ್‌ ಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳು ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ವಿದೇಶಿ ಕಂಪನಿಗಳು ಹಾಗೂ ಸ್ವಂತ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಟರ್ ಸಂಸ್ಥೆಯು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್, ನವದೆಹಲಿ ರವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಇಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರುಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ತರಬೇತಿ ನೀಡಲಾಗುತ್ತಿದೆ. ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಂಸ್ಥೆಯನ್ನು ಮೆಂಟರ್ (ಮಾರ್ಗದರ್ಶಕ) ಸಂಸ್ಥೆಯಾಗಿ ಗುರುತಿಸಿದೆ ಎಂದು ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

Key words: Mysore University- School of Planning – Architect – ranked – 7th -best architecture college

ENGLISH SUMMARY…

UoM’s School of Planning and Architecture bags 7th best architecture College at the national level
Mysuru, July 6, 2022 (www.justkannada.in): The India Today Survey has rated the School of Planning and Architecture, the University of Mysore as the 7th Best Architecture College at the National-level for the year 2022. It is the first best college in Karnataka State.
In a press statement issued by Prof. G. Hemanth Kumar, Vice-Chancellor, University of Mysore has mentioned that India Today, in association with the Marketing and Development Research Associates (MDRA) conducts the “India Today Group MDRA Best Colleges Ranking 2022,” survey every year. This is a survey conducted to rank the best college based on certain criteria. According to the India Today survey the IIT Roorkee has earned first place, followed by ASPA, New Delhi in the 2nd place. The School of Planning and Architecture, University of Mysore has bagged the 7th ranking. The School had bagged the 7th rank in 2021-22 also.
The School of Planning and Architecture, University of Mysore has also earned 6th top architecture College in the Super Excellence in India – 2022 selections conducted by the Global Human Resource Development Center (GHRDC) and 3rd place in the South Region.
The University of Mysore commenced the B.Arch and M.Arch. (Urban Design) courses in 2002 and Ph.D. in Architecture in 2022-23. The students of this school have earned several awards including the National Best Thesis Award given by the Council of Architecture, New Delhi, and Prof. V.N. Prasad’s Best Thesis award, given by ITPI, New Delhi. The alumni of this college are serving in top positions in government and private companies in the national and international organizations.
The School of Planning and Architecture has entered into an MoU with the Center for Science and Environment, New Delhi, where students and teachers are provided an opportunity to learn modern technology and undertake research activities. The school has been recognized as the ‘Mentor’ institute by the Union Rural Development Secretariat, Government of India.
Keywords: University of Mysore/ Prof. G.Hemanth Kumar/ School of Planning and Architecture/ 7th best/ award