ವಾರ್ಡ್ ನ ಅಭಿವೃದ್ಧಿ ಅನುದಾನ ದಸರಾ ಕಾಮಗಾರಿಗೆ ಬಳಸಿಕೊಂಡ ಆರೋಪ: ತನಿಖೆ ನಡೆಸಲು ಪಾಲಿಕೆ ಸದಸ್ಯರಿಂದ ಆಗ್ರಹ…..

ಮೈಸೂರು,ನ,22,2019(www.justkannada.in):   ವಾರ್ಡ್ ನ ಅಭಿವೃದ್ಧಿ ಅನುದಾನವನ್ನ ದಸರಾ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಮೈಸೂರು ಮಹಾನಗರ ಪಾಲಿಕೆ ಸದಸ್ಯರು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪಾಲಿಕೆ ಸದಸ್ಯರ ವಿರೋಧದ ನಡುವೆಯೂ ದಸರಾ ಕಾಮಗಾರಿಯ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ ಎಂದು ಮೈಸೂರು ಪಾಲಿಕೆ ಆಯುಕ್ತರ ವಿರುದ್ಧ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು ಬಿಲ್ ಪಾವತಿ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಮಾಜಿ ಪಾಲಿಕೆ ಸದಸ್ಯ ಶೌಕತ್ ಪಾಷಾ, ಪಾಲಿಕೆ ಸದಸ್ಯರಾದ ಡಾ.ಅಶ್ವಿನಿ ಶರತ್, ಪ್ರಮೀಳಾ ಭರತ್, ಪಲ್ಲವಿ, ವೇದಾವತಿ, ಶ್ರೀಧರ್, ಸತ್ಯರಾಜು ಅವರು ಬಿಲ್ ಪಾವತಿ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಮೊದಲು ವಾರ್ಡ್ ಅಭಿವೃದ್ಧಿಗೆ ಗಮನ ಹರಿಸುವಂತೆಯೂ ಪಾಲಿಕೆ ಆಯುಕ್ತರಿಗೆ ಒತ್ತಡ ಹೇರಿದ್ದಾರೆ.

ಪಾಲಿಕೆ ಬಂದಿರುವ 17ಕೋಟಿ ಹಣವನ್ನು ಸಾಮಾನ್ಯ ಕಾಮಗಾರಿಗಳ ಗುತ್ತಿಗೆದಾರರಿಗೆ ಪಾವತಿಸುವಂತೆ ಸದಸ್ಯರು ಮನವಿ ಮಾಡಿದ್ದರು. ಆದರೆ ಮೈಸೂರು ಪಾಲಿಕೆ ಆಯುಕ್ತರು, ಉಸ್ತುವಾರಿ ಸಚಿವರ ಸಲಹೆ ಮೇರೆಗೆ 2017-18ನೇ  ಸಾಲಿನ ದಸರಾ ಕಾಮಗಾರಿಗಳ ಬಿಲ್ ಪಾವತಿ ಮಾಡಿದ್ದಾರೆ. ಕೌನ್ಸಿಲ್ ಸಭೆಯಲ್ಲೂ ಚರ್ಚೆ ಮಾಡದೇ ದಸರಾ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ ಎಂದು ಆಯುಕ್ತರ ನಡೆಗೆ ಪಾಲಿಕೆ ಸದಸ್ಯರ ವಿರೋಧ ವ್ಯಕ್ತಪಡಿಸಿದ್ದಾರೆ.

Key words: mysore-city corporation- members -Ward- development- grants – Dasara