ಹಿಂದೂ‌ ಮುಖಂಡರ ಹತ್ಯೆಗೂ ನಡೆದಿತ್ತೆ ಸ್ಕೆಚ್: ಎಚ್. ಜಿ ಗಿರಿಧರ್ ಮನೆಗೆ ಪೊಲೀಸ್ ಭದ್ರತೆ…

ಮೈಸೂರು,ನ,22,2019(www.justkannada.in): ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಈ ನಡುವೆ ಹಿಂದೂ ಮುಖಂಡರ ಹತ್ಯೆಗೂ ಸ್ಕೇಚ್ ಹಾಕಲಾಗಿತ್ತು ಎಂಬ ಸ್ಪೋಟಕ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳಿಂದ ಈ ಮಾಹಿತಿ ಬಹಿರಂಗವಾಗಿದೆ. ಹಿಂದೂ ಸಂಘಟನೆ ಮುಖಂಡ ಗಿರಿಧರ್ ಹತ್ಯೆಗೂ ‌ ಪ್ಲಾನ್ ಮಾಡಿದ್ದರೆಂದು ಆರೋಪಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಇದೀಗ ಹಿಂದೂ ಮುಖಂಡ ಎಚ್.ಜಿ. ಗಿರಿಧರ್ ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.

ನಗರದ ಎನ್‌.ಆರ್. ಕ್ಷೇತ್ರದ  ಕಲ್ಯಾಣಗಿರಿ ಬಡಾವಣೆಯಲ್ಲಿ ಗಿರಿಧರ್ ಅವರ ಮನೆಯಿದ್ದು ಕಲ್ಯಾಣಗಿರಿಯಲ್ಲಿ ಕಲ್ಯಾಣ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನವನ್ನ ಗಿರಿಧರ್ ಸ್ಥಾಪಿಸಿದ್ದಾರೆ.  ಇನ್ನು ಗಿರಿಧರ್ ಅವರಿಗೆ ಗನ್ ಮ್ಯಾನ್ ನೀಡಲಾಗಿದೆ. ಈ ಮಧ್ಯೆ ಹತ್ಯೆ ಹಿಂದಿನ ಮಾಸ್ಟರ್ ಮೈಂಡ್ ಅಬೀದ್ ಪಾಷನನ್ನ ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Key words: Sketch -murder- Hindu leaders-Police security – home-mysore