ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದ್ರೆ ಡಿಕೆಶಿ ಕುತ್ತಿಗೆಗೆ ಬರುತ್ತೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಮೈಸೂರು,ಫೆಬ್ರವರಿ,23,2022(www.justkannada.in): ಒಕ್ಕಲಿಗ ಶಾಸಕರನ್ನ ಕಾಂಗ್ರೆಸ್ ಗೆ ಸೆಳೆಯುವ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಟಾಂಗ್ ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದ್ರೆ ಡಿಕೆಶಿ ಕುತ್ತಿಗೆಗೆ ಬರುತ್ತೆ ಎಂದು ಹೇಳಿದ್ದಾರೆ.

ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ  ಬಗ್ಗೆ ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಈ ರೀತಿಯ ಪ್ರಕ್ರಿಯೆಗಳು ಇನ್ನೂ ನಡೆಯುತ್ತಲೇ ಇವೆ.ನಮ್ಮಲ್ಲೂ ಇಂಟೆಲಿಜೆನ್ಸ್ ರಿಪೋರ್ಟ್ ಇದೆ. ಯಾರ್ ಯಾರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ. ಅಧಿಕಾರಕ್ಕೆ ಬರಲು ಅವರಿವರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಾವು ನಮ್ಮ ಎಲ್ಲ ಶಾಸಕರನ್ನು ಪ್ರೀತಿಯಿಂದ ಕಂಡಿದ್ದೇವೆ. ಪಕ್ಷದ ಶಾಸಕರು, ನಾಯಕರನ್ನ ಪ್ರೀತಿಯಿಂದ ಕಂಡಿದ್ದೇವೆ. ಇದು ಫ್ರೀಡಂ ಇರುವ ಪಕ್ಷ, ಆದರೆ ಇದರ ಹೊರತಾಗಿ ಬೇರೆಯವರ ಜೊತೆ ಕೆಲವು ಮಾತುಕತೆ ನಡೆಸುತ್ತಾರೆ. ಇವೆಲ್ಲವೂ ಸಾಮಾನ್ಯ. ನಮಗೆ ರಿವರ್ಸ್ ಆಪರೇಷನ್ ಬೇಕಾಗಿಲ್ಲ. ಕಾಂಗ್ರೆಸ್ ನಲ್ಲಿ ನಡೆಯುತಿರೋ ತಿಕ್ಕಾಟ ನೋಡಿ ಮುಂದೆ ನಮ್ಮ ಕಡೆ ಬರುತ್ತಾರೆ. ಕೊನೆ ಗಳಿಗೆಯಲ್ಲಿ ಬರುವ ನಾಯಕರಿಗೆ ಅವರದ್ದೇ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಿಲ್ಲ ಎಂದರು.

ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದ್ರೆ ಡಿಕೆಶಿ ಕುತ್ತಿಗೆಗೆ ಬರುತ್ತೆ.ದೇವೆಗೌಡರು ಬದುಕಿರೋವರೆಗೂ ಈ ಸಮಾಜ ಅವರನ್ನ ಕೈಬಿಡಲ್ಲ‌.ಡಿಕೆಶಿ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ. ಇನ್ಯಾರನ್ನದರೂ ಸೆಳೆಯಲಿ ನಾವು ತಲೆ‌ಕೆಡಿಸಿಕೊಳ್ಳಲ್ಲ‌. ದೇವೆಗೌಡರು ಇರೋವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಗೆ ಬರಲಿದೆ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ನ ಬೆಳವಣಿಗೆ ನೋಡಿ ಆ ಪಕ್ಷದವರೇ  ಬರ್ತಾರೆ ಎಂದು ಹೆಚ್.ಡಿಕೆ ತಿಳಿಸಿದರು.

ರಾಷ್ಟ್ರೀಯ ಪಕ್ಷಗಳಿಗೆ ಬೇಕಿರುವುದು ಪರಿಣಾಮ ಬೀರುತ್ತೆ. ಅಮಾಯಕ ಯುವಕರನ್ನ ಬಲಿಕೊಟ್ಟು ರಾಜಕೀಯ ಲಾಭ ಪಡೆಯುತ್ತಾರೆ. ಕೋಮು ಗಲಭೆಗಳಲ್ಲಿ ಯಾವುದೇ ರಾಜಕಾರಣಿಗಳ‌ ಮಕ್ಕಳು ಸಾಯಲ್ಲ. ಅಮಾಯಕ ಬಡ ಮಕ್ಕಳನ್ನ ಸೆಳೆಯುತ್ತಾರಲ್ಲ ಅವರು ಬಲಿಯಾಗ್ತಿದ್ದಾರೆ.ಹಿಂದುತ್ವವನ್ನೇ ಇಟ್ಟುಕೊಂಡು ಹೋದರೆ ನೀವು ಸಕ್ಸಸ್ ಆಗಲ್ಲ. ನನ್ನ ತೋಟಕ್ಕೆ ಬರುವ ಜನರನ್ನ ನೋಡಿ ಹುಚ್ಚು ಹಿಡಿದಿದೆ ಎಂದು ಹೆಚ್.ಡಿಕೆ ಹೇಳಿದರು.

Key words: Former CM-HD Kumaraswamy-DK Shivakumar