ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ- ಮತ್ತು ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಭೇಟಿ: ದೇಗುಲಗಳ ವೀಕ್ಷಣೆ…..

ತಮಿಳುನಾಡು,ಅ,11,2019(www.justkannada.in):   ಎರಡು ದಿನಗಳ ಕಾಲ ಅನೌಪಚಾರಿಕ ಭೇಟಿಗೆ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಜತೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ದೇಗುಲಗಳನ್ನ ವೀಕ್ಷಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಉಡುಗೆ ಪಂಚೆ ತೊಟ್ಟು ಮಿಂಚುತ್ತಿದ್ದು, ಈ ನಡುವೆ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಜತೆ ಮಹಾಬಲಿಪುರಂನ ಕಲಾ ವೈಭವನ್ನ ವೀಕ್ಷಿಸಿದರು. ಇಲ್ಲಿನ ಕಲಾಶಿಲ್ಪಗಳ ಬಗ್ಗೆ ಕ್ಸಿ ಜಿನ್ ಪಿಂಗ್ ಅವರಿಗೆ ವಿವರಿಸಿ ಹೇಳಿದರು. ಉಭಯ ನಾಯಕರು  ಇಂದು ಕಲಾಕ್ಷೇತ್ರದಲ್ಲಿ ನಡೆಯುವ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ವೀಕ್ಷಣೆ ಮಾಡಲಿದ್ದಾರೆ.

ದೇಗುಲಗಳ ವೀಕ್ಷಣೆ ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಭಯೋತ್ಪಾದನೆ, ಗಡಿ ವಿಚಾರ, ವ್ಯಾಪಾರ ಮತ್ತು ಪ್ರವಾಸೋಧ್ಯಮದ ಬಗ್ಗೆ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Key words: Prime Minister -Modi – Chinese President- Xijin Ping -meet – Mahabalipuram