ಮುಡಾ ಹಗರಣಗಳಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದ್ರೂ ಕ್ರಮ –ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಜನವರಿ,9,2021(www.justkannada.in): ಮುಡಾದಲ್ಲಿ‌ ಹಗರಣ ಬೆಳಕಿಗೆ  ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಮುಡಾದ ಹಗರಣಗಳಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದ್ರೂ ಕ್ರಮ ಕೈಗೊಳ್ಳತ್ತೇವೆ ಎಂದು ಹೇಳಿದ್ದಾರೆ.jk-logo-justkannada-mysore

ಸಚಿವ ಎಸ್.ಟಿ ಸೋಮಶೇಖರ್ ಇಂದು ಮೈಸೂರಿನಲ್ಲಿ ಕೃಷ್ಣಧಾಮಕ್ಕೆ ಭೇಟಿ ನೀಡಿ, ಪೇಜಾವರ ಮಠದ ಜಗದ್ಗುರು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಎಸ್.ಟಿ ಸೋಮಶೇಖರ್, ಮುಡಾ ಹಗರಣಗಳಲ್ಲಿ ಯಾರೇ ಭಾಗಿಯಾಗಿದ್ದರು ಅಂತವರ ವಿರುದ್ದ ಕ್ರಮ ಕೈಗೊಳ್ಳೊದು 100% ಸತ್ಯ. ಜಾಗೃತಿ ದಳ,ಡಿವೈಎಸ್ಪಿ  ಹಂತದಲ್ಲಿ ಮುಡಾಗೆ ಹಾಕಬೇಕು ಅಂತ ಕೇಳಿದ್ದೇವೆ. ಮುಡಾ ಅಧ್ಯಕ್ಷರ ಜೊತೆ ಗೃಹ ಸಚಿವರಿಗೆ ಜಂಟಿಯಾಗಿ‌ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ. ನೆನ್ನೆ ರಾತ್ರಿ ಪೊಲೀಸ್ ಕಮಿಷನರ್ ಭೇಟಿ ಮಾಡಿ ಮಾತನಾಡಿ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರು ಯಾರಿದ್ದಾರೆ, ಎಷ್ಟೇ ದೊಡ್ಡವರು ಆಗಿರಲಿ, ಯಾವುದೇ ಬ್ಯಾಗ್ರೌಂಡ್ ಇದ್ರೂ ಅಂತವರನ್ನ ಅರೆಸ್ಟ್ ಮಾಡಿ. ಹಗರಣಕ್ಕೆ ಸಂಭಂದಪಟ್ಟಂತೆ ಯಾರೇ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಪೋರ್ಟ್ ಮಾಡಿದ್ರೂ ಅಂತವರ ವಿರುದ್ದ ಕ್ರಮಕ್ಕೆ‌ ಸೂಚನೆ ನೀಡಿದ್ದೇವೆ ಎಂದರು.

ಗ್ರಾ.ಪಂ ಚುನಾವಣೆಯಲ್ಲಿ ಈ ಬಾರಿಯ ಬಿಜೆಪಿ‌ ಯಶಸ್ವಿಗೆ ಎಲ್ಲರೂ ಕಾರಣ…

ಮೈಸೂರು ಜಿಲ್ಲೆ ಗ್ರಾ.ಪಂ ಚುನಾವಣೆಯಲ್ಲಿ ಈ ಬಾರಿಯ ಬಿಜೆಪಿ‌ ಯಶಸ್ವಿಗೆ ಎಲ್ಲರೂ ಕಾರಣ. ಈ ಭಾಗದ ಎಲ್ಲಾ ಮುಖಂಡರ ಶ್ರಮದಿಂದ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಅಭ್ಯರ್ಥಿಗಳು ಗೆದ್ದಿದ್ದಾರೆ. 1322 ನಮ್ಮ ಕಾರ್ಯಕರ್ತರು ಗೆದ್ದಿರೋದಾಗಿ ಮಾಹಿತಿ ನೀಡಿದ್ದಾರೆ. ಇವತ್ತು ಸಭೆ ಮಾಡುತ್ತಿದ್ದೇವೆ. ಇದೇ ಜನವರಿ 11ಕ್ಕೆ ಕ್ಷೇತ್ರ ವ್ಯಾಪ್ತಿಯಲ್ಲೇ ಸಭೆ ಮಾಡುವಂತೆ ಸ್ಥಳೀಯ ನಾಯಕರಿಗೆ ಸಲಹೆ ನೀಡಿದ್ದೇವೆ. ಮೈಸೂರಿನಲ್ಲಿ ಹಂತ ಹಂತವಾಗಿ ಗ್ರಾ.ಪಂ ಚುನಾವಣೆಯಲ್ಲಿ ಪ್ರಗತಿಯಾಗುತ್ತಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಮೇಯರ್ ಚುನಾವಣೆ ವಿಚಾರ ನನ್ನ ಬಳಿಗೆ ಇನ್ನ ಬಂದಿಲ್ಲ.

ಮೈಸೂರು ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಮೇಯರ್ ಚುನಾವಣೆ ವಿಚಾರ ನನ್ನ ಬಳಿಗೆ ಇನ್ನ ಬಂದಿಲ್ಲ. ನೆನ್ನೆ ಪಾಲಿಕೆ ಸದಸ್ಯರ ಸಭೆ ಮಾಡಿದ್ದು ಚುನಾವಣೆ ವಿಚಾರವಾಗಿ ಅಲ್ಲ. ಜ.11 ತಾರೀಖು ಮುಖ್ಯಮಂತ್ರಿಗಳು ಬರ್ತಾ ಇರುವ ಹಿನ್ನಲೆ, ಜನಸೇವಕ ಕಾರ್ಯಕ್ರಮದಲ್ಲಿ‌ ಭಾಗವಹಿಸುವ ಬಗ್ಗೆ ಸಭೆ ಮಾಡಿದ್ದೇವೆ ಅಷ್ಟೇ ಎಂದರು.muda-scams-biggest-action-minister-st-somashekhar

ಸೋಮವಾರದಿಂದ ಕೊರೋನಾ  ಲಸಿಕೆ ನೀಡುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಸೋಮವಾರದಿಂದ ಲಸಿಕೆ ನೀಡಲಿದ್ದೇವೆ. ರಾಜ್ಯದ 5 ಕೇಂದ್ರಗಳಲ್ಲಿ ಮೈಸೂರು ಸಹ ಒಂದು. ಮೈಸೂರಿನಲ್ಲೂ ಲಸಿಕೆ ವಿತರಣೆಯಾಗಲಿದೆ. ಆಶಾ ಕಾರ್ಯಕರ್ತರು,ವೈದ್ಯರು ಸೇರಿದಂತೆ ಫ್ರಂಟ್ ಲೈನ್ ವಾರಿಯರ್ಸ್‌ ಗೆ ಲಸಿಕೆ ವಿತರಣೆ ಮಾಡಲಿದ್ದೇವೆ. ಇದೇ ವಿಚಾರವಾಗಿ ಅಧಿಕಾರಿಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಸಿದ್ದತೆ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.

ENGLISH SUMMARY….

Legal action will be taken against any person who is involved in MUDA case, irrespective of influence
Mysuru, Jan. 9, 2021 (www.justkannada.in): Mysuru District In-charge Minister S.T. Somashekar today informed that legal action will be taken against any person who is found to be involved in MUDA cases, however influential he or she might be.
Minister S.T. Somashkear visited the Krishdhaama today in Mysuru and sought the blessings of Sri Vishwaprasanna Theerthaswamiji, of the Pejawar Math.
Speaking later to the press persons he said that legal action will be initiated against any person without fail. “along with the MUDA Chairman have requested the Home Minister to designate a vigilance squad at the level of DySP to MUDA. We have also urged the Chief Minister and the Police Commissioner too. Irrespective of however influential a person may be action will be taken. Action will also be initiated against those who try to support them directly or indirectly,” he added.
Keywords: Minister S.T. Somashekar/ MUDA/ legal action

Key words: Muda- scams – biggest –action-Minister- ST Somashekhar.