ಭಾರತ ತೊರೆಯಲು ಸಜ್ಜಾಗಿರುವ  8 ಸಾವಿರಕ್ಕೂ ಹೆಚ್ಚಿನ ಶ್ರೀಮಂತರು..!

Promotion

ನವದೆಹಲಿ, ಜೂನ್ 16, 2022(www.justkannada.in): 2022ರಲ್ಲಿ ಭಾರತದ ಸುಮಾರು ೮,೦೦೦ ಶ್ರೀಮಂತರು ಭಾರತವನ್ನು ತೊರೆಯಲು ಸಜ್ಜಾಗಿದ್ದು, ತಮ್ಮ ಸ್ವಂತ ದೇಶದಿಂದ ನಿಗರ್ಮಿಸುತ್ತಿರುವ ಅತೀ ಹೆಚ್ಚಿನ ಸಂಖ್ಯೆಯ ಶ್ರೀಮಂತರ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂಬ ಅಂಶವನ್ನು ಹೊಸ ಅಧ್ಯಯನವೊಂದು ಬಹಿರಂಗಗೊಳಿಸಿದೆ.

ಹೆನ್ಲಿ ಗ್ಲೋಬಲ್ ಸಿಟಿಜನ್ಸ್ ರಿಪೋರ್ಟ್, ೨೦೨೨ರ ೨ನೇ ತ್ರೈಮಾಸಿಕ ವರದಿಯ ಪ್ರಕಾರ, ಉತ್ತಮ ಜೀವನ ಗುಣಮಟ್ಟ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳನ್ನು ಅರಸುತ್ತಿರುವುದು ಈ ಶ್ರೀಮಂತರು ವಲಸೆ ಹೋಗಲು ಬಯಸಿರುವ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಠಿಣ ತೆರಿಗೆ ಪದ್ಧತಿ ಹಾಗೂ ಅತೀ ಹೆಚ್ಚು ಪ್ರಮಾಣದ ವೈಯಕ್ತಿಕ ತೆರಿಗೆಯಿಂದ ಪಾರಾಗುವುದೂ ಸಹ ಪ್ರಮುಖ ಕಾರಣಗಳಲ್ಲಿ ಸೇರಿವೆ.

ಉಕ್ರೇನ್ ಮೇಲೆ ರಷ್ಯಾ ನಡೆಸಿದ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿವೆ. ಇದರಿಂದಾಗಿ ರಷ್ಯಾದಲ್ಲಿ ದೇಶದಿಂದ ನಿರ್ಗಮಿಸುತ್ತಿರುವವರ ಶ್ರೀಮಂತರ ಸಂಖ್ಯೆ ಹೆಚ್ಚಾಗಿದೆ. ಚೀನಾ ಹಾಗೂ ಭಾರತ ನಂತರದ ಸ್ಥಾನದಲ್ಲಿದೆ. ಹಾಂಗ್‌ ಕಾಂಗ್, ಚೀನಾದ ಕಠಿಣ ನಿಯಂತ್ರಣದಡಿ ನಲುಗುತ್ತಿದ್ದು, ಯುದ್ಧದಿಂದಾಗಿ ಉಕ್ರೇನ್ ಪ್ರಜೆಗಳು ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದಾಗಿ ಈ ಎರಡು ರಾಷ್ಟ್ರಗಳೂ ಸೇರಿದಂತೆ ಮೇಲಿನ ರಾಷ್ಟ್ರಗಳು ಮೊದಲ ಐದು ಸ್ಥಾನಗಳನ್ನು ಹಂಚಿಕೊಂಡಿವೆ.

ಸಂಪತ್ತು ಬೌದ್ಧಿಕತೆ ಸಂಸ್ಥೆ ‘ನ್ಯೂ ವರ್ಲ್ಡ್ ವೆಲ್ತ್’ನೊಂದಿಗೆ ಹೂಡಿಕಾ ಸಲಹಾಗಾರ ಸಂಸ್ಥೆ ಹೆನ್ಲಿ & ಪಾರ್ಟ್ರ್ಸ್  ಸಿದ್ಧಪಡಿಸಿರುವ ವರದಿಯ ಒಂದು ಭಾಗವಾಗಿರುವ 2022ರಲ್ಲಿ ವಿಶ್ವದ ಅತ್ಯಂತ ಶ್ರೀಮಂತರ ವಲಸೆಯ ಪ್ರವೃತ್ತಿಯ ಪರಿಷ್ಕರಣೆಯ ಪ್ರಕಾರ, ದೇಶದಿಂದ ನಿರ್ಗಮಿಸುತ್ತಿರುವ ಶ್ರೀಮಂತರ ಸಂಖ್ಯೆ ಭಾರತದ ಮಟ್ಟಿಗೆ ಅಷ್ಟು ದೊಡ್ಡ ನಷ್ಟವೇನೂ ಅಲ್ಲ, ಏಕೆಂದರೆ ವಲಸೆ ಹೋಗುತ್ತಿರುವ ಶ್ರೀಮಂತರ ಹೋಲಿಕೆಯಲ್ಲಿ ಭಾರತ ಇನ್ನೂ ಹೆಚ್ಚಿನ ಸಂಖ್ಯೆಯ ಶ್ರೀಮಂತರನ್ನು ಕಳೆದ ಕೆಲವು ವರ್ಷಗಳಲ್ಲಿ ಸೃಷ್ಟಿಸಿದೆ.

ಎನ್‌ಡಬ್ಲ್ಯುಡಬ್ಲ್ಯುನ ಆಂಡ್ರೂ ಅಮೋಲಿಸ್ ಅವರು, “ನ್ಯೂ ವರ್ಲ್ಡ್ ವೆಲ್ತ್ ನ ಭಾರತದ ಸಾಮಾನ್ಯ ಅಂದಾಜು ಪ್ರಜೆಕ್ಷನ್ ಬಹಳ ಬಲಿಷ್ಠವಾಗಿದೆ. ೨೦೩೧ರ ವೇಳೆಗೆ ಭಾರತದ ಅತೀ ಶ್ರೀಮಂತರ ಜನಸಂಖ್ಯೆ ಶೇ.೮೦ರಷ್ಟು ಹೆಚ್ಚಲಿದೆ. ಇದರೊಂದಿಗೆ ಭಾರತ ಅತೀ ವೇಗವಾಗಿ ಬೆಳೆಯುತ್ತಿರುವ ಸಂಪತ್ತು ಮಾರುಕಟ್ಟೆಗಳ ಪೈಕಿ ಸೇರಲಿದೆ. ಸ್ಥಳೀಯ ಮಟ್ಟದಲ್ಲಿ ಹಣಕಾಸು ಸೇವೆಗಳು, ಆರೋಗ್ಯಸೇವೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಬಲಿಷ್ಠ ಬೆಳವಣಿಗೆ ಇದಕ್ಕೆ ಪೂರಕವಾಗಿರಲಿದೆ,” ಎಂದು ವಿಶ್ಲೇಷಿಸಿದ್ದಾರೆ.

ಅವರ ವರದಿಯ ಪ್ರಕಾರ ಯುಎಇ ವಿಶ್ವದ ಅತೀ ಸಂಪತ್ತು ಹೊಂದಿರುವ ರಾಷ್ಟ್ರವಾಗಲಿದೆ. ಯುಎಇ ಜೊತೆಗೆ ಶ್ರೀಮಂತರು ವಲಸೆ ಹೋಗುವ ನೆಚ್ಚಿನ ಸ್ಥಳಗಳಲ್ಲಿ ಆಸ್ಟ್ರೇಲಿಯಾ, ಸಿಂಗಪೂರ್, ಇಸ್ರೇಲ್, ಸ್ವಿಡ್ಜರ್‌ ಲ್ಯಾಂಡ್, ಯುಎಸ್, ಪೋರ್ಚುಗಲ್, ಕೆನಡಾ ಹಾಗೂ ನ್ಯೂಜೀಲ್ಯಾಂಡ್‌ ಗಳು ಸೇರಿವೆ.

ಖೇತಾನ್ & ಕಂ.ಯಲ್ಲಿ ಹೂಡಿಕಾ ನಿಧಿ ಅಭ್ಯಾಸಗಳ ವಿಭಾಗದ ಕಾನೂನು ಸಲಹಾಗಾರ, ನೇರ ತೆರಿಗೆ ಪಾಲುದಾರ ಬಿಜಲ್ ಅಜಿಂಕ್ಯಾ ಅವರು ತಿಳಿಸಿರುವಂತೆ ಕಠಿಣ ತೆರಿಗೆ ನಿಯಮಗಳು ಹಾಗೂ ವರದಿ ಮಾಡಿಕೊಳ್ಳುವಿಕೆಯ ಅಂಶಗಳ ಜೊತೆಗೆ, ಬಲಿಷ್ಠ ಪಾಸ್‌ಪೋರ್ಟ್ ಗಳ ಅಪೇಕ್ಷೆ, ಯೂರೋಪಿಯನ್ ರಾಷ್ಟ್ರಗಳು, ದುಬೈ ಹಾಗೂ ಸಿಂಗಪೂರ್‌ ಗೆ ವಲಸೆ ಹೋಗಲು ಬಯಸುತ್ತಿರುವ ಭಾರತೀಯ ಮೂಲದ ಶ್ರೀಮಂತರ ಪ್ರಮುಖ ಕಾರಣಗಳಾಗಿವೆ.

ತಂತ್ರಜ್ಞಾನ ಉದ್ಯಮಿಗಳು ಹಾಗೂ ಕೌಟುಂಬಿಕ ಕಚೇರಿಗಳನ್ನು ಸ್ಥಾಪಿಸುವವರಿಗೆ ಸಿಂಗಪೂರ್ ಮೆಚ್ಚಿನ ವಲಸೆಯ ಸ್ಥಳವಾಗಿದೆ ಎಂದಿದ್ದರೆ. “ವೀಸಾ ಪಡೆದುಕೊಳ್ಳಲು ಸುಲಭ ಪ್ರಕ್ರಿಯೆ ಹಾಗೂ ಲಭ್ಯವಿರುವ ವಿಪುಲ ಅವಕಾಶಗಳಿಂದಾಗಿ ದುಬೈ ಸಹ ಮೆಚ್ಚಿನ ತಾಣವಾಗಿದೆ. ಇನ್ನಿತರೆ ಹೂಡಿಕಾದಾರರು ಪೋರ್ಚುಗಲ್, ಮಾಲ್ಟಾ ಹಾಗೂ ಗ್ರೀಸ್‌ ನಂತಹ ಯೂರೋಪಿಯನ್ ರಾಷ್ಟ್ರಗಳ ಕಡೆ ಮುಖ ಮಾಡಿದ್ದಾರೆ.”

“ಈ ರಾಷ್ಟ್ರಗಳು ಯೂರೋಪಿಯನ್ ರಾಷ್ಟ್ರಗಳಿಗೆ ಪ್ರವೇಶದ್ವಾರವಿದ್ದಂತೆ, ಜೊತೆಗೆ ಮಹತ್ವಾಕಾಂಕ್ಷಿ ಜೀವನ ಗುಣಮಟ್ಟ ಹಾಗೂ ಭೌತಿಕ ನಿವಾಸ ಹೊಂದಬೇಕಾದ ಅಗತ್ಯ ಕಡಿಮೆ ಇರುವ ಅಂಶಗಳು ಈ ಕಾರಣಗಳಲ್ಲಿ ಸೇರಿದೆ,” ಎಂದು ತಮ್ಮ ಲೇಖನವೊಂದರಲ್ಲಿ ಬರೆದುಕೊಂಡಿದ್ದಾರೆ.

ಸುದ್ದಿ ಮೂಲ: ದಿ ಟೆಲಿಗ್ರಾಫ್

Key words: More than -8,000 -wealthy people -ready -leave -India.