ಬರ್ತ್ ಡೇ ಪಾರ್ಟಿಗೆ ತೆರಳಿದ್ದ ವೇಳೆ ಹಿನ್ನೀರಿನಲ್ಲಿ ಮುಳುಗಿ ಸಾಫ್ಟ್ ವೇರ್ ಇಂಜಿನಿಯರ್ ಸಾವು.

ಚಿಕ್ಕಬಳ್ಳಾಪುರ,ಸೆಪ್ಟಂಬರ್,25,2021(www.justkannada.in): ಬರ್ತ್ ಡೇ ಪಾರ್ಟಿಗೆ ತೆರಳಿದ್ದ ವೇಳೆ ಹಿನ್ನೀರಿನಲ್ಲಿ ಮುಳುಗಿ ಸಾಫ್ಟ್ ವೇರ್ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ನಗರದ ಸುಂಕದಕಟ್ಟೆಯ ನಿವಾಸಿ ​ ರೋಹಿತ್  ಮೃತಪಟ್ಟ ಸಾಫ್ಟ್​​ವೇರ್ ಎಂಜಿನಿಯರ್.

ಅಕ್ಸೆಂಚರ್ ಸಾಫ್ಟ್​​ವೇರ್​ ಎಂಜಿನಿಯರ್ ರೋಹಿತ್ 5 ಮಂದಿ ಸ್ನೇಹಿತರೊಂದಿಗೆ ಬರ್ತ್​​ ಡೇ ಪಾರ್ಟಿ ಆಚರಣೆಗೆ ಬಂದಿದ್ದರು. ಆತನ ಸ್ನೇಹಿತರು ಹಿನ್ನೀರಿನಲ್ಲಿರುವ ಮರವನ್ನು ಹತ್ತಿ ಸೆಲ್ಫಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಈಜು ಬಾರದಿದ್ದರೂ ರೋಹಿತ್ ನೀರಿಗಿಳಿದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಕುರಿತು ನಂದಿ ಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: death – software engineer- drowned – backwaters – birthday party.