ತಮ್ಮ ಖಾತೆ ವಹಿಸಿಕೊಳ್ಳಲು ನಿರ್ಧರಿಸಿದ ಸಚಿವ ಆನಂದ್ ಸಿಂಗ್.

ಬೆಂಗಳೂರು,ಆಗಸ್ಟ್,24,2021(www.justkannada.in):   ತಾವು ನಿರೀಕ್ಷಿಸಿದ ಖಾತೆ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಖಾತೆ ವಹಿಸಿಕೊಳ್ಳಲು ನಿರಾಕರಿಸಿ ರಾಜೀನಾಮೆ ಚಿಂತನೆ ನಡೆಸಿದ್ಧ ಸಚಿವ ಆನಂದ್ ಸಿಂಗ್ ಇದೀಗ ತಮ್ಮ ನಿರ್ಧಾರವನ್ನ ಬದಲಾಯಿಸಿದ್ದಾರೆ.

ಹೌದು, ತಮಗೆ ನೀಡಿರುವ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನ ವಹಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನ ಭೇಟಿಯಾದ ಸಚಿವ ಆನಂದ್ ಸಿಂಗ್ ಕೆಲ ಕಾಲ ಚರ್ಚೆ ನಡೆಸಿದ್ದು ಈ ವೇಳೆ ಸಚಿವ ಆನಂದ್ ಸಿಂಗ್ ಅವರನ್ನ ಮನವೊಲಿಸಲಾಗಿದೆ ಎನ್ನಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಸಚಿವ ಆನಂದ್ ಸಿಂಗ್, ಮೊದಲು ಖಾತೆಯನ್ನ ನಿಭಾಯಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ , ನಳೀನ್ ಕುಮಾರ್ ಕಟೀಲ್  ಹೇಳಿದ್ದಾರೆ. ಅವರ ಆದೇಶದಂತೆ ನಾನು ಇಂದು ಖಾತೆ ವಹಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಈ ಹಿಂದೆ ಸಲ್ಲಿಸಿದ್ದ ಮನವಿಯನ್ನೇ ಇಂದೂ ಸಲ್ಲಿಸಿರುವೆ. ನನ್ನ ಮನವಿಯನ್ನು ಪರಿಗಣಿಸುವುದಾಗಿ ಸಿಎಂ ಹೇಳಿದ್ದಾರೆ. ವರಿಷ್ಠರ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಇಂದು ನಾನು ನನ್ನ ಖಾತೆಯನ್ನ ವಹಿಸಿಕೊಳ್ಳುತ್ತೇನೆ ಎಂದು ವಿಕಾಸಸೌಧದಲ್ಲಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ENGLISH SUMMARY…

Minister Anand Singh accepts his portfolio
Bengaluru, August 24, 2021 (www.justkannada.in): Minister Anand Singh, who had expressed his displeasure on the distribution of portfolio, and decided to resign, has now changed his decision.
Anand Singh has accepted the tourism portfolio after meeting Chief Minister Basavaraj Bommai, and BJP State President Nalin Kumar Kateel. It is said that he was convinced.
Speaking after meeting the Chief Minister, Anand Singh explained that the CM had asked him to handle the portfolio that has been given to him efficiently, and I have accepted.
However, he also informed that he had again appealed to the Chief Minister who has assured him to consider it. He also said that the CM had assured that he would speak with the high command.
Keywords: Minister Anand Singh/ portfolio/ accepts/ Tourism Minister

Key words: Minister -Anand Singh -decided  –ministrial position