ವಿಶ್ವಕಪ್ ಟೂರ್ನಿಯಿಂದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ  ಔಟ್.

 

ಮುಂಬೈ,ಸೆಪ್ಟಂಬರ್,29,2022(www.justkannada.in):   ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯಿಂದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದಾರೆ.

ಅಕ್ಟೋಬರ್ 23 ರಿಂದ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಭಾರತ ಎದುರಿಸಲಿದೆ. ಈ ಮಧ್ಯೆ ಬೆನ್ನುನೋವಿನ ಮೂಳೆ ಮುರಿತದಿಂದಾಗಿ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ  ಟೂರ್ನಿಯಿಂದ ಹೊರಬಿದ್ದಿದ್ದಾರೆ.

28ರ ಹರೆಯದ ಈ ಹಿಂದೆ ಬೆನ್ನುನೋವಿನಿಂದಾಗಿ ಈ ವರ್ಷದ ಏಷ್ಯಾಕಪ್ ನಿಂದ ಹೊರಗುಳಿದಿದ್ದರು. ಇದೀಗ ಏಷ್ಯಾ ಕಪ್ ಬಳಿಕ ಟಿ20 ವಿಶ್ವ ಕಪ್ ಪಂದ್ಯಾವಳಿಯಿಂದಲೂ ಹೊರಗುಳಿಯುವಂತೆ ಆಗಿದೆ. ಬೂಮ್ರಾ ಅವರ ಅನುಪಸ್ಥಿತಿ ಭಾರತ ತಂಡವನ್ನ ಕಾಡಲಿದೆ.

Key words: India-star pacer -Jasprit Bumrah -out – World Cup