ಸಂಸದೆ ಸುಮಲತಾ ಸುತ್ತ ಗೂಂಡಾ,ಫ್ರಾಡ್ ಗಳಿದ್ಧಾರೆ: ಕ್ರಿಮಿನಲ್ ಕೇಸ್ ದಾಖಲಿಸುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹ.

Promotion

ಮಂಡ್ಯ,ಆಗಸ್ಟ್,19,2021(www.justkannada.in):  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸುತ್ತ  ಗೂಂಡಾಗಳು, ಫ್ರಾಡ್ ಗಳಿದ್ದಾರೆ. ಸಂಸದರ ಲೆಟರ್ ಹೆಡ್ ದುರ್ಬಳಕೆಯಾಗುತ್ತಿದೆ. ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ,  ಸುಮಲತಾ ಅಟೆಂಡರ್, ಒಬ್ಬ ಫ್ರಾಡ್, ನಯ ವಂಚಕ. ಮೆಡಿಕಲ್ ಸೀಟ್ ಕೊಡಿಸುವುದಾಗಿ ಜನರಿಗೆ ಪಂಗನಾಮ ಹಾಕಿದ್ದಾನೆ. ಸುಮಲತಾ ಸುತ್ತ ಇರುವವರಿಂದ ಅಧಿಕಾರಿಗಳಿಗೆ ಧಮ್ಕಿ, ಹಣಕ್ಕಾಗಿ ಪೀಡಿಸಿದ್ದಾರೆ. ಸುಮಲತಾಗೆ ಆಪ್ತ ಕಾರ್ಯದರ್ಶಿ ಎಂಬ ಹುದ್ದೆಯೆ ಇಲ್ಲ. ಶ್ರೀನಿವಾಸ್ ಭಟ್ ಎಂಬುವವನನ್ನ ಅನಧಿಕೃತವಾಗಿ ಪಿಎಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

 ನಿನ್ನೆ ನಡೆದ ದಿಶಾ ಸಭೆಯಲ್ಲಿ  ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವೆ ವಾಕ್ಸಮರ ನಡೆದಿತ್ತು.

Key words: Mandya- Sumalatha Ambarish-MLA-Ravindra Shrikantaiah- demands -filing – criminal case.