ಆಗಸ್ಟ್ 23ರಿಂದ ‘ಕೌನ್ ಬನೇಗಾ ಕರೋಡ್ ಪತಿ’ ಮತ್ತೆ ಶುರು

ಬೆಂಗಳೂರು, ಆಗಸ್ಟ್ 19, 2021 (www.justkannada.in): ‘ಕೌನ್ ಬನೇಗಾ ಕರೋಡ್ ಪತಿ’ 13ನೇ ಸೀಸನ್ ಇದೇ ಆಗಸ್ಟ್ 23ರಿಂದ ಆರಂಭವಾಗಲಿದೆ.

ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದರ 23ನೇ ಆವೃತ್ತಿಗೆ ಮತ್ತೆ ಕಾಲಕೂಡಿ ಬಂದಿದೆ.

12ನೇ ಆವೃತ್ತಿಯಲ್ಲಿ ಸ್ಟುಡಿಯೋದಲ್ಲಿ ಪ್ರೇಕ್ಷಕರ ವೀಕ್ಷಣೆ ಇರಲಿಲ್ಲ. ಹೀಗಾಗಿ ಆಡಿಯನ್ಸ್ ಪೋಲ್ ಇರಲಿಲ್ಲ. ಈ ಬಾರಿ ಮತ್ತೆ ಆಡಿಯನ್ಸ್ ಪೋಲ್ ಇರಲಿದೆ.

ಈ ಸೀಸನ್ ನಲ್ಲಿ ಸ್ಟುಡಿಯೋಗೆ ಪ್ರೇಕ್ಷಕರು ಮರಳಿ ಬರುತ್ತಿರುವುದಕ್ಕೆ ಬಿಗ್ ಬಿ ಸಂತಸ ವ್ಯಕ್ತಪಡಿಸಿದ್ದಾರೆ. ಸೋನಿ ಎಂಟರ್ಟೈನ್ ಮೆಂಟ್ ನಲ್ಲಿ ಶೋ ಪ್ರಾರಂಭವಾಗಲಿದೆ.