Sunday, October 11, 2026

Dasara Wishes

ಪಿಎಂ ಕಿಸಾನ್ ಯೋಜನೆಯಡಿ ಶೇ. 97% ಆಧಾರ್ ಕಾರ್ಡ್ ಜೋಡಣೆ: ಕೇಂದ್ರದಿಂದ ಪುರಸ್ಕಾರ ...
Happy Dasara
Home Front Page ಮತ್ತೆ ಮುಂಬೈ ಇಂಡಿಯನ್ಸ್ ಸೇರಿದ ಕನ್ನಡಿಗ ವಿನಯ್ ಕುಮಾರ್

ಮತ್ತೆ ಮುಂಬೈ ಇಂಡಿಯನ್ಸ್ ಸೇರಿದ ಕನ್ನಡಿಗ ವಿನಯ್ ಕುಮಾರ್

ಬೆಂಗಳೂರು, ಜುಲೈ 30, 2021 (www.justkannada.in): ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ನಾಯಕ ವಿನಯ್ ಕುಮಾರ್ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಣೆಯ (ಟ್ಯಾಲೆಂಟ್​ ಸ್ಕೌಟ್) ಸದಸ್ಯರಾಗಿ ವಿನಯ್ ಕುಮಾರ್ ಆಯ್ಕೆಯಾಗಿದ್ದಾರೆ.

2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ವಿನಯ್ ಕುಮಾರ್ ರೋಹಿತ್ ಶರ್ಮಾ ಪಡೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮತ್ತದೇ ತಂಡಕ್ಕಾಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

17 ವರ್ಷಗಳ ಕಾಲದ ಕ್ರಿಕೆಟ್ ವೃತ್ತಿಜೀವನದಲ್ಲಿ ತಮ್ಮ ನಾಯಕತ್ವದಲ್ಲಿ ವಿನಯ್ ಕುಮಾರ್ ಕರ್ನಾಟಕಕ್ಕೆ ಎರಡು ಬಾರಿ ರಣಜಿ ಟ್ರೋಫಿ ಗೆದ್ದುಕೊಟ್ಟಿದ್ದರು. ಟೀಮ್ ಇಂಡಿಯಾ ಪರ 31 ಏಕದಿನ ಪಂದ್ಯವನ್ನಾಡಿದ ವಿನಯ್ ಕುಮಾರ್ 38 ವಿಕೆಟ್ ಉರುಳಿಸಿದ್ದರು.