ಬಂದ್ ಗೆ ಕರೆ ನೀಡಿದವರಿಗೆ ಬುದ್ದಿ ಹೇಳಿದ್ರೆ ಸಹಜವಾಗಿ ಸಮಾನತೆ ಬರುತ್ತಿತ್ತು: ಸಿಎಂಗೆ ಪತ್ರ ಬರೆದ ಸಾಹಿತಿಗಳಿಗೆ ಸಚಿವ ಬಿ.ಸಿ ನಾಗೇಶ್ ಟಾಂಗ್.

ಬೆಂಗಳೂರು,ಮಾರ್ಚ್,29,2022(www.justkannada.in): ರಾಜ್ಯ ಸರ್ಕಾರವು ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಸೇರಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು, ಜಾತ್ರೆಗಳಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಾಪಾರಿಗಳಿಗೂ ಅವಕಾಶ ಇರಬೇಕು. ರಾಜ್ಯದಲ್ಲಿನ ಧರ್ಮ ದ‍್ವೇಷ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಸಾಹಿತಿಗಳು ಮತ್ತು ಬುದ‍್ಧಿ ಜೀವಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಬಿಸಿ ನಾಗೇಶ್,  ಬಂದ್ ಗೆ ಕರೆ ಕೊಟ್ಟವರ ಬಗ್ಗೆ ಮಾತಾಡಿಲ್ಲ.  ಶಾಲೆಯಲ್ಲಿ ಧರ್ಮ ತರೋಕೆ ಹೋದವರ ಬಗ್ಗೆ ಮಾತನಾಡಿಲ್ಲ.  ಆರು ಮಕ್ಕಳಿಗೆ ಸಾಹಿತಿಗಳು ಬುದ್ಧಿ ಹೇಳಿದ್ಧರೆ ಇಂದು ಒಳ್ಳೆಯ ವಾತಾವರಣ ಇರುತ್ತಿತ್ತು. ಎಂದರು.

ಶಾಲೆಯಲ್ಲಿ ಸಂವಿಧಾನ ಆಚರಣೆ ಮಾಡಿದ್ದು ನಾವು  ಬಂದ್ ಗೆ ಕರೆ ನೀಡಿದವರಿಗೆ ಬುದ್ದಿ ಹೇಳಿದ್ರೆ ಸಹಜವಾಗಿ ಸಮಾನತೆ ಬರುತ್ತಿತ್ತು.  ಸಾಹಿತಿಗಳು ತಪ್ಪು ವಿಳಾಸಕ್ಕೆ ಪತ್ರ ಬರೆದಿದ್ದಾರೆ. ಸಿಎಂ ಬೊಮ್ಮಾಯಿ ಸಮಾನತೆ ತರಲು ಹೊರಟವರು. ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.

Key words: letter-CM-Writers-minister-BC Nagesh