ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ಮೊದಲ ಸಾಂಗ್ ರಿಲೀಸ್ ಇಂದು

ಬೆಂಗಳೂರು, ಮಾರ್ಚ್ 03, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಮೊದಲ ಹಾಡು ಇಂದು ಸಂಜೆ ಲಾಂಚ್ ಆಗುತ್ತಿದೆ.

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಈ ಸಿನಿಮಾಗೆ ಸಂಗೀತ ಸಂಯೋಜಿಸಿದವರು ಅರ್ಜುನ್ ಜನ್ಯಾ.

ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ರಾಬರ್ಟ್ ಸಿನಿಮಾದ ‘ಬಾ ಬಾ ಬಾ ನಾ ರೆಡಿ’ ಎನ್ನುವ ಪಕ್ಕಾ ಮಾಸ್ ಶೈಲಿಯ ಹಾಡು ಇಂದು ಸಂಜೆ 5.01 ಗಂಟೆಗೆ ಬಿಡುಗಡೆಯಾಗಲಿದೆ.