ಕಬ್ಬು ದರ ನಿಗದಿ, ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ನ.24 ರಂದು ಸಿಎಂಗೆ ಒತ್ತಾಯ ಪತ್ರ -ಕುರುಬೂರು ಶಾಂತಕುಮಾರ್…   

ಮೈಸೂರು,ನವೆಂಬರ್,21,2020(www.justkannada.in): ಕಬ್ಬು ದರ ನಿಗದಿ, ರೈತರ ಸಮಸ್ಯೆಗಳ ಬಗ್ಗೆ  ಗಮನ ಸೆಳೆಯಲು ನವೆಂಬರ್ 24ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಒತ್ತಾಯ ಪತ್ರ ಸಲ್ಲಿಕೆಗೆ ತೀರ್ಮಾನ ಮಾಡಲಾಗಿದೆ ಎಂದು ರಾಜ್ಯದ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.kannada-journalist-media-fourth-estate-under-loss

ಈ ಕುರಿತು ಮಾಹಿತಿ ನೀಡಿರುವ ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರರು ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಾ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ಎಫ್ ಆರ್ ಪಿ ದರ ರೈತರಿಗೆ ನಷ್ಟ ಉಂಟು ಮಾಡುತ್ತಿದೆ, ಸಕ್ಕರೆ ಇಳುವರಿಯಲ್ಲಿ ಕಾರ್ಖಾನೆಗಳು  ರೈತರಿಗೆ ಮೋಸ ಮಾಡುತ್ತಿವೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಸ್ಥಳೀಯ ರೈತರು ಕಬ್ಬನ್ನು ಹದಿನೈದು ತಿಂಗಳಾದರೂ ಕಟಾವು ಮಾಡದೆ ಹೊರ ಜಿಲ್ಲೆಯಿಂದ ಕಬ್ಬು ತಂದು ನುರಿಸಲಾಗುತ್ತಿದೆ, ಬಣ್ಣಾರಿ ಕಾರ್ಖಾನೆಯವರು ಕಾನೂನುಬಾಹಿರವಾಗಿ ಚಟುವಟಿಕೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಕಬ್ಬಿನ ಎಫ್ ಆರ್ ಪಿ ದರವನ್ನು ರೈತರ ಹೊಲದ ದರ ಎಂದು ನಿಗದಿಪಡಿಸಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರ ಹೊಲದಲ್ಲಿಯೇ ಕೃಷಿ ಉತ್ಪನ್ನಗಳ ಖರೀದಿ ಮಾಡುವ ವ್ಯವಸ್ಥೆ ಜಾರಿ ಮಾಡಿರುವ ಸರ್ಕಾರ ಕಬ್ಬಿಗೂ ಅನ್ವಯಿಸುವಂತೆ ಕ್ರಮ ಕೈಗೊಳ್ಳಬೇಕು. ಸಕ್ಕರೆ ಸಚಿವರು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.letter-cm-may-24-problems-sugarcane-pricing-farmers-mysore-kuruburu-shanthakumar

ಭತ್ತದ ಬೆಂಬಲ ಬೆಲೆಗೆ ಪ್ರೋತ್ಸಾಹಧನ ಹೆಚ್ಚುವರಿಯಾಗಿ ಕ್ವಿಂಟಾಲ್ ಗೆ 200 ರೂ  ನೀಡಬೇಕು ಎಂದು ಒತ್ತಾಯಿಸಲು ಮುಖ್ಯಮಂತ್ರಿಗಳ ಗಮನ ಸೆಳೆಯಲು  ನಿರ್ಧರಿಸಲಾಗಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

Key words: Letter -CM -May 24 – problems -sugarcane -pricing – farmers-mysore-Kuruburu Shanthakumar.