ನನಗೆ ತಿಳಿದಂತೆ ಮುರುಘಾ ಮಠದಲ್ಲಿ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ – ಮಾಜಿ ಶಾಸಕ ಬಸವರಾಜನ್

ಮೈಸೂರು, ಜನವರಿ,19,2023(www.justkannada.in): ಮಠದಲ್ಲಿ 25ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಪ್ರತಿಕ್ರಿಯಿಸಿದ್ದಾರೆ.

ನನಗೆ ತಿಳಿದಹಾಗೆ ಮುರುಘಾ ಮಠದಲ್ಲಿ ಇಬ್ಬರು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆದಿದೆ. ಇಬ್ಬರು ಮಕ್ಕಳು ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬಂದಿದ್ದರು. ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೆ. ಇತರ ಮಕ್ಕಳ ಮೇಲೆ ದೌರ್ಜನ್ಯ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ ಕಳೆದ 15 ವರ್ಷಗಳಿಂದ‌ ಮಠದಿಂದ ನಾನು ದೂರ ಇದ್ದೇನೆ ಎಂದು ಬಸವರಾಜನ್ ತಿಳಿಸಿದ್ದಾರೆ.

ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ  ಇಂದು ಭೇಟಿ ನೀಡಿದ ಮಾಜಿ ಶಾಸಕ  ಬಸವರಾಜನ್ ದಂಪತಿ ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಬಸವರಾಜನ್, ಬೇರೆ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಬಂದಿದ್ದೆ. ಒಡನಾಡಿ ಮುಖ್ಯಸ್ಥರನ್ನು ನೋಡಿ ಮಾತನಾಡಿಸಲು ಬಂದೆ ಅಷ್ಟೇ. ಮುರುಘಾ ಮಠದ ಸಂತ್ರಸ್ತ ಮಕ್ಕಳನ್ನು ಇಲ್ಲಿಗೆ ಕಳುಹಿಸಿದ್ದು ನಾನೇ. ಈಗ ಮಕ್ಕಳ ಮನಸ್ಥಿತಿ ಸುಧಾರಿಸಿದೆಯಂತೆ. ಸದ್ಯ ನಾನು ಮಕ್ಕಳನ್ನು ಮಾತನಾಡಿಸಲಿಲ್ಲ. ಅವರು ಶಾಲೆಗೆ ಹೋಗಿದ್ದಾರಂತೆ ಎಂದು ತಿಳಿಸಿದರು.

Key words: two children – sexually- assaulted – Muruga Math-  Former MLA –Basavarajan