ನಕಲಿ ದಾಖಲೆ ಸೃಷ್ಠಿಸಿ ಶಾಸಕರ ಆಸ್ತಿ ಕಬಳಿಕೆ ಯತ್ನ ಪ್ರಕರಣ: ಮತ್ತಷ್ಟು ಆರೋಪಿಗಳಿರುವ ಸುಳಿವು ನೀಡಿದ ಡಿಸಿಪಿ ಪ್ರದೀಪ್ ಗುಂಟಿ‌.

ಮೈಸೂರು,ಸೆಪ್ಟಂಬರ್,17,2022(www.justkannada.in):  ನಕಲಿ ದಾಖಲೆ ಸೃಷ್ಠಿಸಿ ಶಾಸಕರ ಆಸ್ತಿ ಕಬಳಿಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜಾರಾಮ್ ಬಂಧಿಸಲಾಗಿದೆ.  ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳಿರುವ ಬಗ್ಗೆ ಡಿಸಿಪಿ ಪ್ರದೀಪ್ ಗುಂಟಿ‌ ಸುಳಿವು ನೀಡಿದ್ದಾರೆ.

ಈ ಕುರಿತು ಮಾತನಾಡಿದ  ಡಿಸಿಪಿ ಪ್ರದೀಪ್ ಗುಂಟಿ‌, ಕಾಂಗ್ರೆಸ್ ಮುಖಂಡ ರಾಜಾರಾಮ್ ಬಂಧನ ಹಿನ್ನೆಲೆ, ಪ್ರಕರಣದಲ್ಲಿ ನಯೀಮ್ ಬಂಧಿಸಲಾಗಿತ್ತು. ನಯೀಮ್ ವಿಚಾರಣೆ ಮಾಡಿದ ಬಳಿಕ ಹಲವು ಸತ್ಯ ಹೊರಬರುತ್ತಿದೆ. ಈ ಸಂಬಂಧ ಬೆಂಗಳೂರಿನ ಶಾಸಕರು‌ ದೂರು ನೀಡಿದ್ದರು. ತಮ್ಮ ಆಸ್ತಿಯನ್ನ ನಕಲಿ ದಾಖಲೆ‌ ಸೃಷ್ಠಿಸಿ ಮಾರಾಟ ಯತ್ನ ಮಾಡಿದ್ದಾರೆ. ಸರಿಯಾದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ. ನಮ್ಮ ಆಸ್ತಿಯನ್ನ ಸಂರಕ್ಷಿಸಿಕೊಡಿ ಎಂದು ದೂರು ನೀಡಿದ್ದರು.

ದೂರಿನ ಕುರಿತು ತನಿಖೆ ನಡೆಸುವಾಗ ಸತ್ಯ ಹೊರ ಬಂದಿದೆ. ಪ್ರಕರಣ ಸಂಬಂಧ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಯಾರ್ಯಾರ ಕೈವಾಡ ಇದೆ ಎಂಬುದರ ಕುರಿತು ತನಿಖೆ ಆರಂಭವಾಗಿದೆ ಎಂದು ಡಿಸಿಪಿ ಪ್ರದೀಪ್  ಗುಂಟಿ ತಿಳಿಸಿದ್ದಾರೆ.

Key words: MLA- property – creating – fake document-DCP -Pradeep Gunti