ಟಿ. ನರಸೀಪುರ ತಾಲ್ಲೂಕಿನಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ …

ಮೈಸೂರು,ಜು,11,2020(www.justkannada.in): ಮೈಸೂರು ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು ಈ ನಡುವೆ ಇಂದು ಟಿ.ನರಸೀಪುರ ತಾಲ್ಲೂಕಿನಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.jk-logo-justkannada-logo

ತಾಲ್ಲೂಕಿನ ಬನ್ನೂರು ಪಟ್ಟಣ ಹಾಗೂ ನಿಂಗೇಗೌಡನ ಹುಂಡಿ ಗ್ರಾಮದ ಇಬ್ಬರು ವ್ಯಕ್ತಿಗಳಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಬನ್ನೂರು ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿಯ ನಿವಾಸಿ 21 ವರ್ಷದ ಕರ್ಪೂರ ವ್ಯಾಪಾರಿಗೆ ಕೊರೋನಾ ತಗುಲಿದೆ. ಹಾಗೆಯೇ ತಾಲ್ಲೂಕಿನ ನಿಂಗೇಗೌಡನ ಹುಂಡಿ ಗ್ರಾಮದ ಸಕ್ಕರೆ ಕಾಯಿಲೆ ಪೀಡಿತ 61 ವರ್ಷದ ವ್ಯಕ್ತಿಗೂ ಕೊರೋನಾ ಪಾಸಿಟಿವ್ ದೃಢವಾಗಿದೆ.mysore- T.Narasipura –taluk-Corona positive - four

ಇನ್ನು ದಾಸೇಗೌಡನಕೊಪ್ಪಲು ಗ್ರಾಮದ 29 ವರ್ಷದ ಯುವಕನಿಗೆ ಹಾಗೂ ಕುಂತನಹಳ್ಳಿ ಗ್ರಾಮದ 50 ವರ್ಷದ ಮಹಿಳೆಗೆ ಮಾಹಾಮಾರಿ ವಕ್ಕರಿಸಿದೆ, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗಳಿಗೂ ಕೊರೋನಾ ಹಬ್ಬುತ್ತಿದ್ದು ಟಿ. ನರಸೀಪುರ ಜನರಲ್ಲಿ ಆತಂಕ ಮನೆ ಮಾಡಿದೆ.

Key words: mysore- T.Narasipura –taluk-Corona positive – four