ಮಳೆಗೆ ಜಲಾವೃತಗೊಂಡಿದ್ಧ ರೈನ್ ಬೋ ಲೇಔಟ್ ನಲ್ಲಿ ಕಳ್ಳರ ಕೈಚಳಕ.

ಬೆಂಗಳೂರು, ಸೆಪ್ಟೆಂಬರ್ 12 ,2022(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ತತ್ತರಿಸಿದ್ದ ರೈನ್ ಬೋ ಲೇಔಟ್ ನಲ್ಲಿ ಇದೀಗ  ಕಳ್ಳರು ಕೈಚಳಕ ತೋರಿದ್ದಾರೆ.

ಭಾರಿಮಳೆಗೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡು ಜನರು ಸಂಕಷ್ಟಕ್ಕೀಡಾಗಿದ್ದರು.  ಈ ಮಧ್ಯೆ ರೈನ್ ಬೋ ಲೇ ಔಟ್ ನಲ್ಲೂ ಮಳೆಯಿಂದಾಗಿ ಜಲಾವೃತವಾಗಿ ಜನರು ತೊಂದರೆ ಅನುಭವಿಸಿದ್ದರು. ಇದೀಗ ಇದೇ ಲೇಔಟ್ ನಲ್ಲಿ ಮೂರು ಮನೆಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ರೈನ್ ಬೋ ಲೇಔಟ್‌ ಕೆಲವು ಮನೆಗಳಲ್ಲಿ ಸರಣಿ ಮನೆಗಳ್ಳತನ ಮಾಡಿರುವ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ.   ಮಳೆಯಿಂದಾಗಿ ಇಡೀ ಲೇಔಟ್‌ನಲ್ಲಿ ನೀರು ನುಗ್ಗಿ ಜನ ಪರದಾಡುದ್ದರು. ಇಡೀ ಲೇಔಟ್ ನಲ್ಲಿ ಕರೆಂಟ್ ಕೂಡ ಇರಲಿಲ್ಲ ಸಿಸಿಟಿವಿ ಕೂಡ ವರ್ಕ್ ಆಗ್ತಿರ್ಲಿಲ್ಲ. ಸಾಲದಕ್ಕೆ ಸಾಕಷ್ಟು ಜನ ಮನೆ ಬಿಟ್ಟು ಬೇರೆಡೆ ತಾತ್ಕಾಲಿಕವಾಗಿ ವಾಸವಾಗಿದ್ದರು  ಇದನ್ನ ಉಪಯೋಗಿಸಿಕೊಂಡ ಖದೀಮರು ಈ ಕೃತ್ಯವೆಸಗಿದ್ದಾರೆ. ಈ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ  ಬಲೆ ಬೀಸಿದ್ದಾರೆ.

Key words: Bangalore- Thieves- rain-flooded -rainbow layout.