ಏನೇ ಕೆಲಸವಾಗಬೇಕಾದ್ರೂ ಲಂಚ ಕೊಡಬೇಕು: ಬಿಜೆಪಿ ಬೆಂಬಲಿಸುವ ಮುನ್ನ ಯೋಚಿಸಿ- ಡಿ.ಕೆ ಶಿವಕುಮಾರ್.

ಹಾವೇರಿ,ಜನವರಿ,14,2023(www.justkannada.in):  ಈ ಸರ್ಕಾರದಲ್ಲಿ ಏನೇ ಕೆಲಸವಾಗಬೇಕಾದರೂ ಲಂಚ ಕೊಡಬೇಕು. ಹೀಗಾಗಿ ಜನರೇ ಬಿಜೆಪಿಗೆ ಬೆಂಬಲ ಕೊಡುವ ಮುನ್ನ ಯೋಚಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ  ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್,  ಬೊಮ್ಮಾಯಿ ಅವರೇ ನಿಮ್ಮ ಸರ್ಕಾರ  ಎರಡು ತಿಂಗಳು ಮಾತ್ರ ಇರೋದು. ಎರಡು ತಿಂಗಳ ಬಳಿಕ ಈ ವೇದಿಕೆ ಮೇಲೆ ಕುಳಿತವರ ಸರ್ಕಾರವಿರುತ್ತೆ.  40 ಪರ್ಸೆಂಟ್ ಕಮಿಷನ್ ಕೊಡಲು ಬಿಜೆಪಿಗೆ ಬೆಂಬಲ ಕೊಡಬೇಕಾ..?  ರಾಜ್ಯದಲ್ಲಿ ನಿರುದ್ಯೋಗ ಸೃಷ್ಠಿ ಮಾಡಿದ ಬಿಜೆಪಿಗೆ ಬೆಂಬಲ ಕೊಡಬೇಕಾ..?  ಬಿಜೆಗೆ ಬೆಂಬಲ ಕೊಡುವ ಮುನ್ನ ಜನರು ಯೋಚಿಸಿ.  ಏನೇ ಕೆಲಸ ಆಗಬೇಕಾದರೂ ಲಂಚ ಕೊಡಬೇಕು ಎಂದು ಕಿಡಿಕಾರಿದರು.

ಕಲ್ಬುಯರ್ಗಿಯಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದಾರೆ. ತಾಂಡಾಗಳನ್ನ ಕಂದಾಯ ಗ್ರಾಮ ಮಾಡಿದ್ದು ನಮ್ಮ ಸರ್ಕಾರ. ಬಿಜೆಪಿಯವರು ಒಂದು ಸೈಕಲ್, ಸೀರೆ ಬಿಟ್ಟರೇ ಏನು ಕೊಡಲಿಲ್ಲ ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

ಹಾವೇರಿ ಜಿಲ್ಲೆ ಶಾಸಕರು ಕಾಂಗ್ರೆಸ್ ಬರುವುದಕ್ಕೆ ಸಿದ್ದರಾಗಿದ್ದಾರೆ. ಸಮಯ ಬರಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: bribe- Think -before –supporting- BJP- DK Shivakumar.