‘ಇಂಟು ದಿ ವೈಲ್ಡ್​’: ಬೇರ್ ಗ್ರಿಲ್ಸ್​ ಜೊತೆ ಕಾಡು ಸುತ್ತಲಿದ್ದಾರೆ ಕೊಯ್ಲಿ, ದೀಪಿಕಾ

ಬೆಂಗಳೂರು, ಫೆಬ್ರವರಿ 01, 2019 (www.justkannada.in): ಟೀಂ ಇಂಡಿಯಾದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ನಟಿ ದೀಪಿಕಾ ಪಡುಕೋಣೆ ಇಂಟು ದಿ ವೈಲ್ಡ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಳೆದ ಸೋಮವಾರದಿಂದ ಆರಂಭವಾಗಿರೋ ಚಿತ್ರೀಕರಣದಲ್ಲಿ ತಲೈವಾ ರಜಿನಿಕಾಂತ್​ ಮತ್ತು ಆಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್​ ಪಾಲ್ಗೊಂಡಿದ್ದಾರೆ. ನಿಗದಿಯಂತೆ ಕಾರ್ಯಕ್ರಮದ 14 ನೇ ಭಾಗದ 2ನೇ ಮತ್ತು 3ನೇ ಎಪಿಸೋಡ್​ಗಳ ಚೀತ್ರೀಕರಣ ಮುಗಿದಿದೆ.

ನಿರೂಪಕ​ ಬೇರ್ ಗ್ರಿಲ್ಸ್​ ಜೊತೆ ತಲೈವಾ ರಜಿನಿಕಾಂತ್ 6 ಗಂಟೆಗಳ ಕಾಲ ಬಂಡೀಪುರದ ಚುಮ್ಮನಹಳ್ಳ, ಮೂಲೆಹೊಳೆ ಅರಣ್ಯದಲ್ಲಿ ಹಾಗೂ ವಯನಾಡು ಸಂಪರ್ಕಿಸುವ ಟೈಗರ್ ರಸ್ತೆಯಲ್ಲಿ ಕಾಡು-ಮೇಡು, ಹಳ್ಳ ಕೊಳ್ಳದಲ್ಲಿ ಓಡಾಡಿದ್ದರು.