ಕೆಜಿಎಫ್ ಚಾಪ್ಟರ್-2 ರಿಲೀಸ್ ಯಾವಾಗ ಗೊತ್ತಾ?! ಇಂದು ಸಂಜೆ ಸಿಗಲಿದೆ ಉತ್ತರ..

ಬೆಂಗಳೂರು, ಜನವರಿ 29, 2020 (www.justkannada.in): ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನಾಂಕ ಯಾವಾಗ ಎಂಬ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದಾರೆ.

ಇಂದು ಸಂಜೆ 6.32ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಲಿದ್ದೇವೆ ಎಂದು ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಈಗಾಗಲೇ ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಎಲ್ಲ ಚಿತ್ರಗಳ ರಿಲೀಸ್ ದಿನಾಂಕ ಪ್ರಕಟಣೆಯಾಗಿದೆ. ಕನ್ನಡದ ಬಹುತೇಕ ಎಲ್ಲ ಚಿತ್ರಗಳ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. ಇದೀಗ ಆ ಸಾಲಿಗೆ ಕೆಜಿಎಫ್ ಕೂಡ ಸೇರ್ಪಡೆಯಾಗಿದೆ.