ಅಮೆರಿಕಾದಲ್ಲೂ ಕಮಾಲ್ ಮಾಡಲಿದೆ ‘ಮಾಯಾ ಬಜಾರ್’ !

ಬೆಂಗಳೂರು, ಫೆಬ್ರವರಿ 27, 2020 (www.justkannada.in): ಪುನೀತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ ಸಿನಿಮಾ ಅಮೆರಿಕಾದಲ್ಲೂ ಬಿಡುಗಡೆಯಾಗುತ್ತಿದೆ.

ಹೌದು, ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ವಿದೇಶಕ್ಕೂ ತಲುಪುತ್ತಿರುವುದು ಹೊಸದೇನಲ್ಲ. ಆ ಪಟ್ಟಿಗೆ ಇದೀಗ ಮಾಯಾ ಬಜಾರ್ ಸಿನಿಮಾ ಕೂಡ ಸೇರ್ಪಡೆಯಾಗಿದೆ.

ಮಾಯಾಬಜಾರ್ 2016 ಸಿನಿಮಾ ಫೆಬ್ರವರಿ 28 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಅಮೆರಿಕಾದಲ್ಲೂ ಬಿಡುಗಡೆಯಾಗುತ್ತಿದ್ದು ಮಾರ್ಚ್ 6 ರಿಂದ ಅಮೆರಿಕಾದಲ್ಲಿ ತೆರೆ ಕಾಣಲಿದೆ.

ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾಯಾಬಜಾರ್ 2016 ಸಿನಿಮಾ ಪುನೀತ್ ನಿರ್ಮಾಣ ಸಂಸ್ಥೆಯ ಎರಡನೇ ಸಿನಿಮಾವಾಗಿದೆ.