ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್: ಬಂಧನ….

ಬೆಂಗಳೂರು,ಫೆಬ್ರವರಿ,11,2021(www.justkannada.in): ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.jk

ಬೆಂಗಳೂರಿನ ಯಲಹಂಕ ನ್ಯೂ ಟೌನ್ ಬಳಿಯ ಜ್ಞಾನ ಜ್ಯೋತಿ ಮೈದಾನದಲ್ಲಿ ನಡೆದಿದೆ. ಶಬರೀಶ್ ಬಂಧಿತ ಆರೋಪಿ. ಆರೋಪಿ ಟ್ರ್ಯಾಕ್ಸಿ ಡ್ರೈವರ್ ನಾಗರಾಜು ಎಂಬುವವರ ಮೇಲೆ  ಗ್ಯಾಂಗ್ ಹಲ್ಲೆ ಮಾಡಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

firing-police-over-arrest-gangster

ಈ ನಡುವೆ ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಶಬರೀಶ್ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದ. ಶರಣಾಗಲು ತಿಳಿಸಿದ್ದರೂ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಯಲಹಂಕ ಇನ್ಸ್ ಪೆಕ್ಟರ್ ರಾಮಕೃಷ್ಣರೆಡ್ಡಿ ಅವರು ಆರೋಪಿ ಶಬರೀಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Key words: Firing – police –over- arrest- gangster