ಕುಗ್ರಾಮದಲ್ಲಿ ಸ್ವತಃ ಬೋರ್ ವೆಲ್ ಪಂಪ್ ಮಾಡಿ ನೀರು ಕುಡಿದು ದಾಹ ತಣಿಸಿಕೊಂಡ ‘ಜಿಲ್ಲಾಧಿಕಾರಿ.

 

ಬೀದರ್, ಜು.27, 2020 : (www.justkannada.in news) : ಯೋಜನೆಯೊಂದರ ಪ್ರಗತಿ ಪರಿಶೀಲನೆಗೆಂದು ತೆರಳಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಇತರೆ ಹಿರಿಯ ಅಧಿಕಾರಿಗಳು ಅಚಾನಕ್ಕಾಗಿ ದಾರಿಯಲ್ಲಿ ಸಿಕ್ಕ, ಬೋರ್ ವೆಲ್ ನೀರನ್ನೇ ಪಂಪ್ ಮಾಡಿ ಬಳಸಿದ ಫೋಟೋವೊಂದು ಇದೀಗ ಜಾಲತಾಣಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬೀದರ್ ನ ಎಲೆಕ್ಟ್ರಾನಿಕ್ ಮಾಧ್ಯದವ ಹಿರಿಯ ವರದಿಗಾರ ಓಂಕಾರ್ ಮಠಮತಿ, ಈ ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ಮಾಹಿತಿ ಶೇರ್ ಮಾಡಿದ್ದರು. ಅವರು ನೀಡಿರುವ ಮಾಹಿತಿ ಪ್ರಕಾರ,

jk-logo-justkannada-logo

ಈ ಪೋಟೋ ನೋಡಿ ಬಹುಶಃ, ಇಂಥ ದ್ರಶ್ಯ ನೋಡೋಕ್ಕೆ ಸಿಗೋದು ಅಪರೂಪ. ಯಾವ ಪ್ರಚಾರವು ಇಲ್ಲ. ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಬೀದರ್ ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ್ , ಬೀದರ್ ಎಸಿ ಶ್ರೀಧರ್ ಅವರ ಬಲು ಅಪರೂಪದ ಚಿತ್ರವಿದು.

ಗಡಿ ಜಿಲ್ಲೆ ಬೀದರ್ ನ ಔರಾದ್ ತಾಲೂಕಿನ ವಡಗಾಂ ಗ್ರಾಮದ ಬಳಿ ಹಠಾತ್ತನೆ ಭೇಟಿಗೆಂದು ತೆರಳಿದಾಗ ನಡೆದ ಘಟನೆ. ರಸ್ತೆ ಸಮೀಪದ ಕೈಪಂಪ್ ಅನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸ್ವತಃ ಹೊಡೆದು ಕೊಡ ತುಂಬಿದರು. ಈ ವೇಳೆ ಜತೆಯಲ್ಲಿದ್ದ ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ್ ಹಾಗೂ ಬೀದರ್ ಎಸಿ ಶ್ರೀಧರ್ ಅವರು ಈ ಬೋರ್ ವೆಲ್ ನೀರನ್ಬ ಕುಡಿದು ದಾಹ ತೀರಿಸಿಕೊಂಡರು.

bidar-dc-bore-well-pump-dc-officers-drink-water

ಸದಾ ಏರ್ ಕಂಡಿಷನ್ಡ್ ರೂಮ್ ನಲ್ಲಿದ್ದು, ಬಾಟಲಿ ನೀರು ಕುಡಿಯುವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಚಿತ್ರದಿಂದ ಕಲಿಯುವುದು ಬಹಳಷ್ಟಿದೆ. ಗ್ರಾಮಾಂತರ ಜನರು ಕುಡಿಯುವ ನೀರನ್ನೆ ಕುಡಿದ ಈ ಮೂವರು ಅಧಿಕಾರಿಗಳು ಜನರ ಜತೆ ಸಾಮಾನ್ಯರಂತೆ ಕಂಡು ಬಂದಿದ್ದು ನಿಜಕ್ಕೂ ಹೆಮ್ಮೆ ಸಂಗತಿ.

 

oooooo

key words : bidar-dc-bore-well-pump-dc-officers-drink-water