ಅನ್ ಲಾಕ್ ಪ್ರಕ್ರಿಯೆ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಹೊರಬಂತು ಹೊಸ ಸುದ್ದಿ!

Promotion

ಬೆಂಗಳೂರು, ಜೂನ್ 12, 2021 (www.justkannada.in): ಬಿಗ್ ಬಾಸ್ ಮರುಆರಂಭಕ್ಕೆ ತೆರೆಮರೆಯಲ್ಲಿ ತಯಾರಿ ಆರಂಭವಾಗುತ್ತಿದೆ .

ಹೌದು. ರಾಜ್ಯದಲ್ಲಿ ಈಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗುವ ಸುದ್ದಿಯ ಹಿಂದೆಯೇ ಬಿಗ್ ಬಾಸ್ ಪುನರಾರಂಭದ ಬಗ್ಗೆಯೂ ಸುದ್ದಿಯೊಂದು ಹೊರಬಿದ್ದಿದೆ.

ಕಿಚ್ಚ ಸುದೀಪ್ ನಿರೂಪಣೆಯೊಂದಿಗೆ ಜೂನ್ 20 ಅಥವಾ 27 ರ ಭಾನುವಾರದಂದು ಕಾರ್ಯಕ್ರಮ ಮತ್ತೊಮ್ಮೆ ಶುರುವಾಗಲಿದೆ ಎನ್ನಲಾಗಿದೆ.

ಕಾರ್ಯಕ್ರಮ ಅರ್ಧಕ್ಕೆ ಮುಗಿಸುವ ವೇಳೆ ಮನೆಯಲ್ಲಿ ಶುಭಾ ಪೂಂಜಾ , ನಿಧಿ ಸುಬ್ಬಯ್ಯ , ಅರವಿಂದ್ , ಮಂಜು ಪಾವಗಡ , ಪ್ರಿಯಾಂಕಾ ತಿಮ್ಮೇಶ್ , ವೈಷ್ಣವಿ ಗೌಡ , ಪ್ರಶಾಂತ್ ಸಂಬರಗಿ , ದಿವ್ಯಾ ಸುರೇಶ್ , ರಘು ಗೌಡ , ಶಮಂತ್ ಗೌಡ ಮತ್ತು ಚಕ್ರವರ್ತಿ ಚಂದ್ರಚೂಡ್ ಇದ್ದರು.