ಮಳೆ ಅವಾಂತರ: ರಾಮನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ.

0
4

ರಾಮನಗರ,ಆಗಸ್ಟ್,29,2022(www.justkannada.in): ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆ ಅವಾಂತರ ಸೃಷ್ಠಿಸಿದ್ದು ವರುಣನ ಆರ್ಭಟದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಸಮಸ್ಯೆ ಆಲಿಸಲು ಸಿಎಂ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.

ಈಗಾಗಲೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಮನಗರದಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವರ ಜತೆ ಹೆಚ್‌ ಡಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದು, ಚರ್ಚೆ ನಂತರ ರಾಮನಗರ ಜಿಲ್ಲಗೆ ಸಿಎಂ ಬಸವರಾಜ ಬೊಮ್ಮಾಯಿ ತೆರಳಲು ಮುಂದಾಗಿದ್ದಾರೆ.

ನೀವು ರಾಮನಗರದಲ್ಲೇ ಇರಿ, ನಾನು ಅಲ್ಲಿಗೆ ಬರುತ್ತೇನೆ ಎಂದು ಹೆಚ್‌ ಡಿಕೆಗೆ ಸಿಎಂ ಬೊಮ್ಮಾಯಿ ತಿಳಿಸಿದ್ದು, ಇನ್ನು ಕೆಲಹೊತ್ತಿನಲ್ಲೇ ರಾಮನಗರಕ್ಕೆ ಹೆಲಿಕಾಪ್ಟರ್‌ʼನಲ್ಲಿ ಹೊರಡಲಿದ್ದಾರೆ. ಸಿಎಂಗಾಗಿ ರಾಮನಗರದಲ್ಲಿಯೇ ಹೆಚ್,ಡಿ ಕುಮಾರಸ್ವಾಮಿ ಕಾದಿದ್ದಾರೆ. ಇನ್ನು ಬೆಳಗ್ಗೆಯಿಂದಲೇ ರಾಮನಗರ, ಚನ್ನಪಟ್ಟಣದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಸಂಚರಿಸಿ ಜನರ ಸಮಸ್ಯೆ ಅವಲೋಕಿಸುತ್ತಿದ್ದಾರೆ.

Key words: Rain-CM- Basavaraja Bommai – Ramanagara-HD kumaraswamy