Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Crime ಶಾಸಕ ಹೆಚ್ ಡಿ ರೇವಣ್ಣಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ

ಶಾಸಕ ಹೆಚ್ ಡಿ ರೇವಣ್ಣಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ

ಬೆಂಗಳೂರು,ಮೇ,8,2024 (www.justkannada.in):  ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಶಾಸಕ ಹೆಚ್ ಡಿ ರೇವಣ್ಣಗೆ  7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಮೇ 14ರವರೆಗೆ ಹೆಚ್ ಡಿ ರೇವಣ್ಣರಿಗೆ  ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿರುವ ಆರೋಪದ ಮೇಲೆ ಹೆಚ್.ಡಿ ರೇವಣ್ಣ ವಿರುದ್ದ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಹೆಚ್ ಡಿ ರೇವಣ್ಣ ಅವರನ್ನ ಬಂಧಿಸಿದ್ದರು. ಶಾಸಕ ಹೆಚ್ ಡಿ ರೇವಣ್ಣಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ hd revanna

ಇಂದು 17ನೇ ಎಸಿಎಂಎಂ ಕೋರ್ಟ್ ಹೆಚ್ ಡಿ ರೇವಣ್ಣರಿಗೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.  ಈ ನಡುವೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ.

Key words: MLA, HD Revanna,  judicial custody ,  7 days