Saturday, September 5, 2026

BDA Apartments

Home Front Page ಸಂಗೀತ ವಿವಿಗೆ ಯುಜಿಸಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ಪ್ರೊ. ಡಿ.ಶಿವಲಿಂಗಯ್ಯ ನೇಮಕ

ಸಂಗೀತ ವಿವಿಗೆ ಯುಜಿಸಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ಪ್ರೊ. ಡಿ.ಶಿವಲಿಂಗಯ್ಯ ನೇಮಕ

ಬೆಂಗಳೂರು, ಜೂನ್ 12, 2021 (www.justkannada.in): ಮೈಸೂರಿನ ಗಂಗೂಬಾಯಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಯುಜಿಸಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ಪ್ರೊ.ಡಿ.ಶಿವಲಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಯುಸಿಜಿ ಕಾರ್ಯದರ್ಶಿ ಉಮಾಕಾಂತ್ ಬಲುನಿ, ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ  ಪ್ರೊ.ಡಿ.ಶಿವಲಿಂಗಯ್ಯ ಅವರನ್ನು ಸಂಗೀತ ವಿವಿ ಯುಸಿಜಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಈ ಮೊದಲು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದ ಪ್ರೊ.ಡಿ.ಶಿವಲಿಂಗಯ್ಯ ಅವರು ಅದಕ್ಕೂ ಮೊದಲು ಮಂಗಳೂರು ವಿವಿ ಪರೀಕ್ಷಾಂಗ ರಿಜಿಸ್ಟ್ರರ್ ಆಗಿ ತುಮಕೂರು ವಿವಿ ಆಡಳಿತ ರಿಜಿಸ್ಟ್ರರ್ ಆಗಿಯೂ ಕಾರ್ಯನಿರ್ವಹಿಸಿದ್ದರು.