ಮತ್ತೆ ಚೀನಾ ಮೂಲದ 47 ಆ್ಯಪ್ ಗಳನ್ನ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ…

ನವದೆಹಲಿ,ಜು,27,2020(www.justkannada.in): ಇತ್ತೀಚೆಗೆ ಭಾರತ- ಚೀನಾ ನಡುವೆ ಸಂಘರ್ಷದ ನಂತರ  ಚೀನಾ ಮೂಲದ 59 ಆ್ಯಪ್ ಗಳನ್ನ ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಚೀನಾಗೆ ಮತ್ತೆ ಶಾಕ್ ನೀಡಿದೆ.jk-logo-justkannada-logo

ಮತ್ತೆ ಚೀನಾ ಮೂಲದ 47 ಆ್ಯಪ್ ಗಳನ್ನ ಕೇಂದ್ರ ಸರ್ಕಾರ  ಬ್ಯಾನ್ ಮಾಡುವ ಮೂಲಕ ಗಡಿ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದ್ದ ಚೀನಾಗೆ ಶಾಕ್ ನೀಡಿದೆ.  ಇತ್ತೀಚೆಗೆ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ಉಂಟಾಗಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು.  ಈ ಬೆನ್ನಲ್ಲೆ ಟಿಕ್ ಟಾಕ್, ಶೇರ್ ಹಿಟ್, ಹಲೋ ಆ್ಯಪ್ ಸೇರಿದಂತೆ 59 ಚೀನಾ ಆ್ಯಪ್ ಗಳನ್ನು  ಭಾರತ ಬ್ಯಾನ್ ಮಾಡಿತ್ತು.india-central government-banned- China-47 Apps

47 ಆ್ಯಪ್ ಗಳನ್ನ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರ ಹೊಸದಾಗಿ ಬ್ಯಾನ್ ಆಗಿರುವ ಆ್ಯಪ್ ಗಳ ಪಟ್ಟಿಯನ್ನ ಶೀಘ್ರವೇ ಬಿಡುಗಡೆ ಮಾಡಲಿದೆ. ಒಟ್ಟು ಚೀನಾ ಮೂಲದ 106 ಆ್ಯಬ್ ಗಳನ್ನ ನಿರ್ಬಂಧಿಸಿದಂತಾಗಿದೆ.

Key words: india-central government-banned- China-47 Apps