ಕೊರೊನಾ ಸಂಕಷ್ಟ ಕಾಲದಲ್ಲಿ ಸಿಎಸ್’ಕೆ ಕ್ಯಾಪ್ಟನ್ ಧೋನಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಬೆಂಗಳೂರು, ಮೇ 07, 2021 (www.justkannada.in): ಕೆಲ ವಿದೇಶಿ ಆಟಗಾರರು ತವರಿಗೆ ತೆರಳಲು ತಡವಾಗುತ್ತಿದ್ದು, ಇದಕ್ಕಾಗಿ ಸಿಎಸ್ ಕೆ ನಾಯಕ ಧೋನಿ ಕೂಡ ತಡವಾಗಿ ತವರಿಗೆ ತೆರಳಲು ನಿರ್ಧರಿಸಿದ್ದಾರೆ.

ಹೌದು. ಸಿಎಸ್ ಕೆ ನಾಯಕ ಧೋನಿ ಮಾತ್ರ ತಡವಾಗಿ ತವರಿಗೆ ತೆರಳಲು ನಿರ್ಧರಿಸಿದ್ದಾರೆ.

ವಿದೇಶೀ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ದೇಶೀಯ ಆಟಗಾರರು ಸುರಕ್ಷಿತವಾಗಿ ತಲುಪಿದ ಬಳಿಕವೇ ತಮ್ಮ ತವರಿಗೆ ತೆರಳಲು ನಿರ್ಧರಿಸಿದ್ದಾರಂತೆ ಕೂಲ್ ಕ್ಯಾಪ್ಟನ್.

ಧೋನಿ ಈ ನಿರ್ಧಾರಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಜತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.