ಖಾಸಗಿ ಆಸ್ಪತ್ರೆಗಳ ಜತೆ ಸರ್ಕಾರಿ ಆಸ್ಪತ್ರೆಗಳು ಸ್ಪರ್ಧೆ ಮಾಡುವಂತಾದ್ರೆ ಮಾತ್ರ ಸುಧಾರಣೆ ಸಾಧ್ಯ- ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ…

ಕೊಪ್ಪಳ,ನ,6,2019(www.justkannada.in): ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳ ಜೊತೆಗೆ ಸ್ಪರ್ಧೆ ಮಾಡುವಂತಾಗಬೇಕು. ಆಗ ಮಾತ್ರ ಈ ವ್ಯವಸ್ಥೆ ಸುಧಾರಣೆ ಆಗುತ್ತೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಆರೋಗ್ಯ ಇಲಾಖೆ ವತಿಯಿಂದ 2018-19 ನೇ ಕಾಯಕಲ್ಪ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೆದ್ ಅಕ್ತರ್, ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರಧಾನದ ನಂತರ ಮಾತನಾಡಿದ ಸಚಿವ ಶ್ರೀರಾಮುಲು, ಗಾಂಧಿ ಜಯಂತಿ ಅಂಗವಾಗಿ ಮೋದಿ 2014ರಿಂದ ಈ ಕಾಯಕಲ್ಪ ಪ್ರಶಸ್ತಿ ನೀಡಾಗ್ತಿದೆ. ವೈದ್ಯಕೀಯ ಕಾಲೇಜು, ಅರೋಗ್ಯ ಇಲಾಖೆ ಎಂದು ಸ್ವಲ್ಪ ಗೊಂದಲ ಇದೆ. ಆದ್ರೆ ಅದರ ಬಗ್ಗೆ ಯೋಚಿಸದೆ ಸ್ವಚ್ಛತೆ ಕಾಪಾಡಿ. ಇಲಾಖೆಯಲ್ಲಿ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ‌ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ನಡುವೆ ವೇತನ ತಾರತಮ್ಯ….

ಕೊಪ್ಪಳದ ಪ್ರಾಥಮಿಕ ಆರೋಗ್ಯ ಕೇಂದ್ರ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ನಿನ್ನೆ ವೈದ್ಯಕೀಯ ಶಿಕ್ಷಣ ಸಚಿವರು, ನಾನೂ ಸಭೆ ಮಾಡಿದ್ದೇವೆ. ಇಂದು ಬಹಳಷ್ಟು ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿದ್ದೀವಿ. ಆದ್ರೆ ನರ್ಸ್, ಸಿಬ್ಬಂದಿಗೆ ವೇತನ ಕಡಿಮೆ ಇದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ನಡುವೆ ವೇತನ ತಾರತಮ್ಯ ಇದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಒಬ್ಬರೇ ಸಚಿವರಾಗಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಹೆಚ್ಚು ಸಂಬಳ ಇದೆ. ಅರೋಗ್ಯ ಇಲಾಖೆಯ ಸಿಬ್ಬಂದಿಗೆ ವೇತನ ಕಡಿಮೆ ಇದೆ. ಈ ವೇತನ ತಾರತಮ್ಯ ಸುಧಾರಣೆ ಆಗಬೇಕಿದೆ. ನಿನ್ನೆ ಈ ಬಗ್ಗೆ ನಾವಿಬ್ಬರೂ ಸಚಿವರು ಚರ್ಚೆ ಮಾಡಿದ್ದೇವೆ. ಅದೇ ಕಾರಣಕ್ಕೆ ಇಲಾಖೆಯಲ್ಲಿ ಸುಧಾರಣೆ ತರಲು ಈ ಕಾಯಕಲ್ಪ ಪ್ರಶಸ್ತಿ ನೀಡಲಾಗ್ತಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇಂಡಿಯಾ ಪಾಕಿಸ್ತಾನದ ರೀತಿ ಆಗಿದೆ…

ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇಂಡಿಯಾ ಪಾಕಿಸ್ತಾನದ ರೀತಿ ಆಗಿದೆ. ನನ್ಮ ಮಾತಿನಿಂದ ಯಾರಿಗೇ ನೋವಾದ್ರೆ ಕ್ಷಮೆ ಇರಲಿ. ನಾನು ಉತ್ತರ ಕರ್ನಾಟಕದವನು ನೇರವಾಗಿ ಮಾತನಾಡಿ ಅಭ್ಯಾಸವಿದೆ ಜನರಿಗೆ ಒಳ್ಳೆಯದಾಗಲಿ ಎಂಬುದಷ್ಟೆ ನನ್ನ ಕಳಕಳಿ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳ ಜೊತೆಗೆ ಸ್ಪರ್ಧೆ ಮಾಡುವಂತಾಗಬೇಕು. ಆಗ ಮಾತ್ರ ಈ ವ್ಯವಸ್ಥೆ ಸುಧಾರಣೆ ಆಗುತ್ತೆ. ಪ್ರತಿ ಜಿಲ್ಲಾ ಆಸ್ಪತ್ರೆಗೂ ಒಬ್ಬ ಇಂಜಿನಿಯರ್ ನೇಮಕ ಮಾಡಲಾಗುವುದು. ವೈದ್ಯರು ಕಸ ಗುಡಿಸೋಕೆ ಆಗೊಲ್ಲ, ಗುತ್ತಿಗೆ ಪಡೆದವರು ಆ ಕೆಲಸ ಮಾಡಬೇಕು. ಅವರ ಮೇಲೆ ನೀವು ಕಣ್ಣಿಡಿ. ಮುಂದೆ ಈ ಗುತ್ತಿಗೆದಾರರನ್ನು ರದ್ದುಗೊಳಿಸ್ತೀನಿ. ಕಾರ್ಪೋರೆಟ್ ಮಟ್ಟದಲ್ಲಿ ಹೊಸ ಟೆಂಡರ್ ಕರೆದು ಸ್ವಚ್ಛತಾ ವ್ಯವಸ್ಥೆ ಸುಧಾರಿಸುವ ಕೆಲಸ ಮಾಡಲಾಗುವುದು. ಗುಡ್ಡ ಗಾಡು ಪ್ರದೇಶಗಳಲ್ಲಿ ಸೇವೆ ಮಾಡುವ ವೈದ್ಯರಿಗೆ ಇನ್ನು ಸಂಬಳ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ನಾನು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸರ್ಕಾರಿ ವೈದತಯರಿಗೆ ಯಾವುದೇ ಸೌಲಭ್ಯ ನೀಡೊಲ್ಲ ಎಂದಿದ್ದು. ರಾಜಕಾರಣಿಗಳಿಗೆ ಅಧಿಕಾರ ಶಾಶ್ವತ ಅಲ್ಲ, ಆದ್ರೆ ಅಧಿಕಾರಿಗಳು ಈ ವ್ಯವಸ್ಥೆ ಸುಧಾರಿಸುವಂತೆ ಮಾಡಬೇಕು. ಎಲ್ಲ‌ಕಡೆ ಈಗ ಭ್ರಷ್ಟಾಚಾರ ತಾಂಡವಾಡ್ತಿದೆ. ಸರ್ಕಾರಿ ಆಸ್ಪತ್ರೆಗೆ ಬರುವವರಲ್ಲಿ ಹೆಚ್ಚಿನವರು ಬಡವರು. ಹೀಗಾಗಿ ಈ ವ್ಯವಸ್ಥೆ ಸುಧಾರಣೆ ಆಗಬೇಕು. ಎಲ್ಲ ಜಿಲ್ಲೆಗಳಲ್ಲಿ ಐದೈದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಡಿಎಚ್ಓಗಳಿಗೆ ಸೂಚನೆ ನೀಡಿದ್ದೇನೆ. ಎನ್‌ಎಚ್ಎಂ, ಎನ್.ಆರ್.ಎಚ್.ಎಂಗಳಿಂದ 2500 ಕೋಟಿ ರೂ. ಹಣ ಬಂದಿದೆ. ಅದರಲ್ಲಿ ಕೇವಲ 30 ಕೋಟಿ ರೂ. ಖರ್ಚಾಗಿದೆ. ನಾನು ಈ ಬಾರಿ ಎರಡನೇ ಬಾರಿ ಈ ಇಲಾಖೆಯಲ್ಲಿ ಸಚಿವನಾಗಿದ್ದೇನೆ. ಎಲ್ಲೆಲ್ಲಿ ಏನು ನಡಿತಿದೆ ಅಂತಾ ನನಗೆ ಗೊತ್ತು, ತಕ್ಷಣ ಆ ಎಲ್ಲ ಹಣ ಉಪಯೋಗ ಆಗಬೇಕು. ಬಡ ಜನರಿಗೆ ಆರೋಗ್ಯ ಸೇವೆ ಸಿಗಬೇಕು.  ಸೌಲಭ್ಯಗಳನ್ನು ಕೊಡಲು ನಾನು ಸಿದ್ದನಿದ್ದೇನೆ ಎಂದು ಸಚಿವ ಶ್ರೀರಾಮುಲು ಆಶ್ವಾಸನೆ ನೀಡಿದರು.

ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಕರವೇ ಕಾರ್ಯಕರ್ತರ ಹಲ್ಲೆ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು,  ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದು ಗೊತ್ತಾಗಿದೆ. ಹಲ್ಲೆ ಮಾಡಿದವರು ದಯಮಾಡಿ ಎರಡು ತಾಸು ಆಸ್ಪತ್ರೆಯಲ್ಲಿ ಕುಳಿತುಕೊಳ್ಳಿ. ಆಗ ಅವರ ಕೆಲಸದ ಒತ್ತಡ ಗೊತ್ತಾಗುತ್ತೆ. ವೈದ್ಯರು ಅಂದ್ರೆ ನಾರಾಯಣೋ ಹರಿ ಅಂತೀವಿ. ವೈದ್ಯರದ್ದು ಪ್ರಾಣ ಉಳಿಸುವ ಕೆಲಸ ಅಷ್ಟೇ. ಆದ್ರೆ ವೈದ್ಯರ ಮೇಲೆ ಹಲ್ಲೆ ಮಾಡಿ ಏನು ಪಡಿತೀರಿ? ದಯಮಾಡಿ ಅವರ ಕರ್ತವ್ಯದ ಒತ್ತಡವನ್ನ ಅರಿತು ನಡೆಯುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

Key words: Improvement – achieved -government hospitals -compete – private hospitals-Health Minister -Sriramulu.