ಸಿಎಂ ಬಿಎಸ್ ಯಡಿಯೂರಪ್ಪ ಅವರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದು…

ಉತ್ತರ ಕನ್ನಡ,ಆ,31,2019(www.justkannada.in):  ಹವಾಮಾನ ವೈಪರೀತ್ಯ ಹಿನ್ನೆಲೆ  ಸಿಎಂ ಬಿಎಸ್ ಯಡಿಯೂರಪ್ಪ ಅವರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದಾಗಿದೆ.

ಸಿಎಂ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್  ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಗೆ ಕಾರ್ಯಕ್ರಮ ನಿಗದಿಯಾಗಿತ್ತು. ಇಂದು ಉತ್ತರ ಕನ್ನಡ ಜಿಲ್ಲೆ ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು.

ಇದಕ್ಕಾಗಿ ಬೆಂಗಳೂರಿನಿಂದ ಈಗಾಗಲೇ ಹೆಲಿಕಾಪ್ಟರ್ ಹೊರಟು ಶಿವಮೊಗ್ಗಕ್ಕೆ ತಲುಪಿತ್ತು. ಆದ್ರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್  ಶಿವಮೊಗ್ಗದಲ್ಲೇ ನಿಲುಗಡೆಯಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ಧಾಗಿದ್ದು, ಹವಾಮಾನ ವೈಪರಿತ್ಯ ಮತ್ತೆ ಜಿಲ್ಲೆಗೆ ನಿರಾಸೆ ತಂದಿದೆ.

Key words: CM BS Yeddyurappa -cancels -Uttara Kannada- District -tour