ನನಗೂ ಐಎಂಎ ಕಂಪನಿ ವಂಚನೆ ಪ್ರಕರಣಕ್ಕೂ ಸಂಬಂಧವಿಲ್ಲ- ಸ್ಪಷ್ಟನೆ ನೀಡಿದ ಮಾಜಿ ಸಚಿವ ರೋಷನ್ ಬೇಗ್..

ಬೆಂಗಳೂರು,ಜೂ,10,2019(www.justkannada.in):  ಐಎಂಎ ಕಂಪನಿ ಮಾಲೀಕ ಮನ್ಸೂರ್ ನಾಪತ್ತೆ ಮತ್ತು ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧಿವಿಲ್ಲ ಎಂದು ಮಾಜಿ ಸಚಿವ ಹಾಗೂ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಸ್ಪಷ್ಟನೆ ನೀಡಿದ್ದಾರೆ.

ಐಎಂಎ ಮಾಲೀಕ ಮನ್ಸೂರ್ ಖಾನ್ ಹಲಾಲ್ ಆದಾಯದ ಹೆಸರಿನಲ್ಲಿ ಸಾರ್ವಜನಿಕರಿಂದ ಚಿನ್ನದ ಮೇಲೆ ಹೂಡಿಕೆ ಮಾಡಿಸಿಕೊಂಡು, ಲಾಭಾಂಶ ನೀಡುತ್ತಿದ್ದ ಐಎಂಎ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ಆಡಿಯೋ ಮಾಡಿ ಪರಾರಿಯಾಗಿದ್ದು ಆಡಿಯೋ  ವೈರಲ್ ಆಗಿದೆ.

ಈ ಆಡಿಯೋದಲ್ಲಿ ಶಿವಾಜಿನಗರ ಕ್ಷೇತ್ರದ ಶಾಸಕ  ಮಾಜಿ ಸಚಿವ ರೋಷನ್ ಬೇಗ್ ವಿರುದ್ದ ಮನ್ಸೂರ್ ಖಾನ್ ಆರೋಪ ಮಾಡಿದ್ದಾರೆ.  ಶಿವಾಜಿನಗರ ಕ್ಷೇತ್ರದ ಶಾಸಕ 400 ಕೋಟಿ ರೂ ವಂಚನೆ ಮಾಡಿದ್ದಾರೆ ಎಂಬ ಆರೋಪ ಹೊರಿಸಿದ್ದು ಈ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ರೋಷನ್ ಬೇಗ್, ನನ್ನ ಹೆಸರನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.  ನನಗೂ ಐಎಂಎ ಕಂಪನಿ ವಂಚನೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ನನ್ನ ವಿರುದ್ದ ಫೇಕ್ ಆಡಿಯೋ  ಬಿಡುಗಡೆ ಮಾಡಲಾಗಿದೆ.  ಸುಳ್ಳು ಆರೋಪ ಮಾಡಿರುವ ಕಂಪನಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ರೋಷನ್ ಬೇಗ್ ತಿಳಿಸಿದ್ದಾರೆ.

Key words: IMA company fraud case- Former Minister Roshan Baig clearify

#IMA #company #fraudcase #FormerMinister #RoshanBaig