ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ನೆರವೇರಿತು ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ…

ಬೆಂಗಳೂರು,ಜೂ,10,2019(www.justkannada.in): ಬಹುಅಂಗಾಂಗ ವೈಪಲ್ಯದಿಂದ ಇಂದು ನಿಧನರಾದ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ನೆರವೇರಿತು.

ನಗರದ ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ  ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ ಯಾವುದೇ ಸರ್ಕಾರಿ ಗೌರವವಿಲ್ಲದೆ, ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ  ನೆರವೇರಿತು.  ಕಾರ್ನಾಡ್ ಅವರ ಕೊನೆಯ ಆಸೆಯಂತೆ ಹಿರಿಯ ಪುತ್ರ ರಘು ಕಾರ್ನಾಡ್ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅತ್ಯಂತ ಸರಳವಾಗಿ ಅಂತಿಮ ವಿಧಾನ ಮಾಡುವ ಮೂಲಕ ಕಾರ್ನಾಡ್ ಅವರ ಅಂತ್ಯಕ್ರಿಯೆಯನ್ನು ಕುಟುಂಬವರ್ಗ ನೆರವೇರಿಸಿತ್ತು.

ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ ವೇಳೆ  ಗಣ್ಯಾತೀಗಣ್ಯರು ಪಾಲ್ಗೊಂಡಿದ್ದರು.

 

Key words: Senior writer- GirishKarnad – funeral –without- any religious- rituals