Sunday, August 23, 2026

BDA Apartments

Home Front Page ಕ್ರಿಕೆಟ್: ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ಆಟಗಾರರು ಹಿಂದೇಟು

ಕ್ರಿಕೆಟ್: ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ಆಟಗಾರರು ಹಿಂದೇಟು

ಕೊಲೊಂಬೊ, 10, 2019 (www.justkannada.in): ಶ್ರೀಲಂಕಾ ಕ್ರಿಕೆಟಿಗರು ಪಾಕ್‌ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ಪಾಕಿಸ್ತಾನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನ ಕೃತ್ಯಗಳ ಹಿನ್ನೆಲೆಯಲ್ಲಿ ಭದ್ರತೆಯ ವಿಷಯವಾಗಿ ಆತಂಕಗೊಂಡಿರುವ ಆಟಗಾರರು ಪಾಕ್ ತೆರಳಲು ನಿರಾಕರಿಸಿದ್ದಾರೆ.

ಶ್ರೀಲಂಕಾ ತಂಡ ಇದೇ ತಿಂಗಳ 27 ರಿಂದ ಅಕ್ಟೋಬರ್‌ 9ರ ಅವಧಿಯಲ್ಲಿ ಮೂರು ಏಕದಿನ ಪಂದ್ಯ, ಮೂರು ಟಿ-20 ಪಂದ್ಯಗಳನ್ನು ಆಡಲು ಪಾಕಿಸ್ತಾನಕ್ಕೆ ತೆರಳಬೇಕಾಗಿದೆ.

ಪ್ರವಾಸಕ್ಕೆ ಸಂಬಂಧಿಸಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಶ್ರೀಲಂಕ ಕ್ರಿಕೆಟ್‌ ಮಂಡಳಿಯು ಆಟಗಾರರ ಜೊತೆ ಸಭೆ ನಡೆಸಿತು. ಪ್ರವಾಸದಲ್ಲಿ ಪಾಲ್ಗೊಳ್ಳುವ ಅಥವಾ ಹೊರಗುಳಿಯುವ ಸ್ವಾತಂತ್ರ್ಯವನ್ನು ಆಟಗಾರರಿಗೆ ನೀಡಲಾಗಿದೆ ಎಂದು ಶ್ರೀಲಂಕ ಕ್ರಿಕೆಟ್‌ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.