ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ ಹಾಗೂ ಹರಿಸು ಸೇನೆ  ಸಂಘಟನೆಯಿಂದ ಪ್ರತಿಭಟನೆ…

ಕೋಲಾರ,ಜೂ,10,2019(www.justkannada.in):  ಭೂಸ್ವಾಧೀನ ಕಾಯ್ದೆ  ತಿದ್ದುಪಡಿ ವಿರೋಧಿಸಿ ಇಂದು ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು  ಕೋಲಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಕೋಡಿಹಳ್ಳಿ ಚಂದ್ರಶೇಕರ್ ಸ್ಥಾಪಿತ ರೈತ ಸಂಘ ಹಾಗೂ ಹರಿಸು ಸೇನೆ  ಸಂಘಟನೆಯ ನೇತೃತ್ವದಲ್ಲಿ ರಾಷ್ಟ್ರಿಯ ಹೆದ್ದಾರಿ ಬಂದ್ ನಡೆಸುವ ಮೂಲಕ‌ ಪ್ರತಿಭಟನೆ ನಡೆಸಿದ್ರು .ಕೋಲಾರ ರಾಷ್ಟೀಯ ಹೆದ್ದಾರಿ ಕೊಂಡರಾಜಹಳ್ಳಿ ಗೇಟ್ ಬಳಿ ರೈತ  ಸಂಘಟನೆ ಹಾಗೂ ವಿವಿದ ರೈತ ಪರ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಬದಲಾಯಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ರೈತರ ಒಪ್ಪಿಗೆ ಇಲ್ಲದೆ ಜಮೀನು ವಶಕ್ಕೆ ಪಡೆಯಬಾರದು ಸ್ವಾಧೀನಪಡಿಸಿಕೊಂಡ ಜಮೀನಿಗೆ, ನಾಲ್ಕು ಪಟ್ಟು ದರವನ್ನು ಪರಿಹಾರವನ್ನಾಗಿ ಕೊಡಬೇಕು ಹಾಗೂ ಜಮೀನು ಕಳೆದು ರೈತರಿಗೆ ಪುನರ್ವಸತಿ ಕಲ್ಪಿಸಬೇಕೆಂಬ ನಿಯಮ ಸಡಿಸಿಲಿ ಏಕಗಂಟಿನ ಪರಿಹಾರ ಯೋಜನೆ ಮುಂದಾಗಿರುವ ಸರ್ಕಾರಗಳ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ಹೊಸ ಉದ್ದೇಶಿತ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನವಾಗಲಿದೆ . ಇನ್ನು ಕಳೆದ ಫೆ 6ರಿಂದ 13 ರವರೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಯಾವುದೇ ಚರ್ಚೆ ಮಾಡದೆ ರೈತರ ಸಲಹೆ ಸೂಚನೆ ಪಡೆಯದೆ ಮಸೂದೆ ಅಂಗೀಕಾರ ಪಡೆದಿದೆ. ಸರ್ಕಾರದ ತಪ್ಪು ನಿರ್ಧಾರ ವಿರೋಧಿಸಬೇಕಿದ್ದ ವಿರೋಧ ಪಕ್ಷವೂ ಮುಖ್ಯಮಂತ್ರಿ ಗದ್ದುಗೆಗಾಗಿ ಬೇರೆ ಹೋರಾಟದಲ್ಲಿ ಮಗ್ನವಾಗಿದೆ. ಹೀಗಾದರೆ ಅನಕ್ಷರಸ್ತ ರೈತರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದ ಆಹಾರ ಭದ್ರತೆ ಹಾಗೂ ಸ್ವಾವಲಂಬನೆ ಮೇಲಾಗುವ ದುಷ್ಪರಿಣಾಮ ಪರಿಗಣಿಸದೆ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಖಂಡನೀಯ ಕೇಂದ್ರ ಸರ್ಕಾರ ಸಹ ಮೂರು ಬಾರಿ ಸುಗ್ರೀವಾಜ್ಞೆ ಮೂಲಕ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸಿದೆ.  ರೈತ ವಿರೋಧಿ ನಿಲುವು ತಳೆಯಲು ಯಾವ ಸರ್ಕಾರಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭೂ ಸ್ವಾಧೀನ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಮನವಿ ಮಾಡಿದರು. ಹೆದ್ದಾರಿ   ತಡೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನ ಸಾಲು ಸಾಲು ನಿಂತಿದ್ದು ಬೇರೆ ಊರುಗಳಿಗೆ ತೆರಳು ವಾಹನ ಸವಾರರು  ಪರದಾಡುತ್ತಿದ್ದ ಪರಿಸ್ಥಿತಿ ಸರ್ವೆ ಸಾಮಾನ್ಯವಾಗಿತ್ತು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಹೋರಾಟಗಾರ ರನ್ನು ಬಲವಂತವಾಗಿ ವಶಕ್ಕೆ ಪಡೆದು ಪೊಲೀಸ್ ಜೀಪ್ ಗಳ‌ಮೂಲಕ ಕರೆಯ್ದೂರು.

Key words: Opposition to Amendment to Land Acquisition Act.Protest by the Farmer Association

#Kolar #Amendment #LandAcquisitionAct. #Protest #FarmerAssociation ..