ಜನಪ್ರತಿನಿಧಿಗಳು, ಅಧಿಕಾರಿಗಳ ಹನಿಟ್ರ್ಯಾಪ್ ಪ್ರಕರಣ: ಯಾವುದೇ ಒತ್ತಡ ಬಂದಿಲ್ಲ- ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ…

ಬೆಂಗಳೂರು, ಡಿ.2,2019(www.justkannada.in):  ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ.  ವಿಡಿಯೋ ಡಿಲಿಟ್ ಮಾಡುವಂತೆ ಯಾವುದೇ ಒತ್ತಡ ಬಂದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ  ಇಂದು ಮಾಧ್ಯಮದ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಡಿಲೀಟ್ ಮಾಡುವಂತೆ ಯಾರೂ ಯಾರ ಮೇಲೂ ಒತ್ತಡ ಹೇರಿಲ್ಲ. ಅಧಿಕಾರಿಗಳು ಕಾನೂನಿನ ಪ್ರಕಾರ ತನಿಖೆ ನಡೆಸುತ್ತಿದ್ದು,  ಅದೇ ರೀತಿ ತನಿಖೆ ಮಾಡುವಂತೆ ನಾನೂ ಕೂಡ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ವಿಪಕ್ಷದ ನಾಯಕರನ್ನ ಲೇವಡಿ ಮಾಡಿದ ಸಚಿವ ಬಸವರಾಜ ಬೊಮ್ಮಾಯಿ,  ವಿಪಕ್ಷ ನಾಯಕರಿಗೆ ಕನಸಿನಲ್ಲಿಯೂ ಬಿಎಸ್ ವೈ ಬರ್ತಾರೆ. ಅವರಿಗೆ ಗೊತ್ತಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಅಂತಾ. ಅದಕ್ಕೆ ಹೊಸ ಸರ್ಕಾರ ಮಾಡ್ತೇವೆಂದು ರಾಗ ಬದಲಿಸಿದ್ದಾರೆ. ಹೀಗಾದ್ರೂ ಜನ ತಮ್ಮ ಪಕ್ಷಕ್ಕೆ ಮತ ಹಾಕಲಿ ಎಂಬ ಉದ್ದೇಶ ಎಂದು ಲೇವಡಿ ಮಾಡಿದರು.

ಬೈ ಎಲೆಕ್ಷನ್ ನಲ್ಲಿ ಸಿದ್ದರಾಮಯ್ಯ ಒಬ್ಬರೇ ಓಡಾಡುತ್ತಿದ್ದಾರೆ. ಉಳಿದ ನಾಯಕರೆಲ್ಲರೂ ಸುದ್ದಿಗೋಷ್ಟಿಗೆ ಸೀಮಿತರಾಗಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಟೀಕಿಸಿದರು.

Key words: Honeytrap Case – No Pressure-Home Minister- Basavaraja Bommai -clarified.