ಫೋನ್ ಕದ್ಧಾಲಿಕೆ ಆರೋಪ ಮಾಡಿದ ಡಿ.ಕೆ ಶಿವಕುಮಾರ್ ಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದು ಹೀಗೆ…

ಬೆಂಗಳೂರು,ಆ,21,2020(www.justkannada.in):  ನನ್ನ ಫೋನ್ ಕದ್ಧಾಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.jk-logo-justkannada-logo

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಆರ್.ಅಶೋಕ್,  ಭೂತದ ಬಾಯಲ್ಲಿ ಭಗವತ್ಗೀತೆ ಎಂಬಂತೆ ಡಿ.ಕೆ ಶಿವ ಕುಮಾರ್ ಆರೋಪ ಮಾಡಿದ್ದಾರೆ. ಅವರದ್ಧೆ ಸರ್ಕಾರವಿದ್ದಾಗ  ಫೋನ್ ಕದ್ಧಾಲಿಕೆ ಆಗಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿರುವುದು ಗೊತ್ತಿದೆ. ರಿಸಲ್ಟ್ ಸದ್ಯದಲ್ಲೇ ಬರುತ್ತದೆ ಯಾರೆಲ್ಲಾ ಭಾಗಿಯಾಗಿದ್ದರು ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಹಾಗೆಯೇ ಭೂತದ ಬಾಯಲ್ಲಿ ಭಗವತ್ಗೀತೆ ಎಂಬಂತೆ  ಅವರ ಬಾಯಿಂದ  ನಿರೀಕ್ಷೆ ಮಾಡಿರಲಿಲ್ಲ. ನಮ್ಮದು ಅಂತಹ ಸಂಸ್ಕೃತಿ ಅಲ್ಲ. ಪೋನ್ ಕದ್ಧಾಲಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.minister-r-ashok-kpcc-president-dk-sivakumar-phone-tapping

ಇನ್ನು ಪೊಲೀಸರಿಗೆ ಬೆದರಿಕೆ ಹಾಕುವ ಸಂಸ್ಕೃತಿ ಒಳ್ಳೆಯದಲ್ಲ. ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದರು.

Key words: Minister -R Ashok –kpcc-president- DK Sivakumar- phone tapping.