ಧಾರಾಕಾರ ಮಳೆಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ: ತ್ವರಿತವಾಗಿ ದುರಸ್ಥಿ ಕಾರ್ಯ ನಡೆಸಲು ಸಚಿವರಿಂದ ಸೂಚನೆ.

ಮೈಸೂರು,ಅಕ್ಟೋಬರ್,21,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಧಾರಾಕಾರ ಮಳೆ ಸುರಿದ ಪರಿಣಾಮ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ದಸರಾ ದೀಪಾಲಂಕಾರ “ಸುಸ್ವಾಗತ”ವಿದ್ಯುತ್ ಬೋರ್ಡ್ ಸಮೀಪದಲ್ಲಿ ಈ ಘಟನೆ ನಡೆದಿದ್ದು  ಪ್ರವಾಸಿಗರು ಹಾಗೂ ಭಕ್ತರು ಆ ರಸ್ತೆಯಲ್ಲಿ ಸಂಚರಿಸದಂತೆ ಮೈಸೂರು ನಗರ ಪೊಲೀಸ್ ಕಮಿಷನರ್‌ ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ.

ಇನ್ನು ರಾತ್ರಿ ಸುರಿದ  ಧಾರಾಕಾರ ಮಳೆಗೆ ನಗರದ ಹಲವು ಕಡೆಗಳಲ್ಲಿ ರಸ್ತೆಗಳು ತುಂಬಿ ತುಳುಕಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಅಶೋಕ ರಸ್ತೆ, ದೊಡ್ಡ ಗಡಿಯಾದ ವೃತ್ತದಲ್ಲಿ ಮಳೆಯಿಂದಾಗಿ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿ ಅವುಗಳನ್ನ ಎಳೆಯಲು ಸವಾರರು ಪರದಾಡಿದ ಸ್ಥಿತಿ ಉಂಟಾಗಿತ್ತು.

ಚಾಮುಂಡಿಬೆಟ್ಟ ಭೂಕುಸಿತದ ದುರಸ್ತಿ ಕಾರ್ಯ ತ್ವರಿತವಾಗಿ ನಡೆಸಲು  ಜಿಲ್ಲಾಧಿಕಾರಿಗಳಿಗೆ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ

ಗುಡ್ಡ ಕುಸಿತದ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್,  ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಚಾಮುಂಡಿಬೆಟ್ಟದಲ್ಲಿ ಬೃಹತ್ ನಂದಿ ಪ್ರತಿಮೆಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ರಸ್ತೆ ಹಾನಿಗೀಡಾಗಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಮುಂದಾಗಬಹುದಾದ ಅನಾಹುತ ತಪ್ಪಿಸಲು ಕೂಡಲೇ ಆ ರಸ್ತೆ ಸಂಚಾರವನ್ನು ಬಂದ್ ಮಾಡಿ, ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು.
ಆದಷ್ಟು ಶೀಘ್ರದಲ್ಲಿ ನಾನು ಬಂದು ಪರಿಶೀಲಿಸುತ್ತೇನೆ. ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ತೆಗೆದುಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದಾರೆ.

Key words: Heavy- rains – Chamundi hills – Mysore- collapse.

ENGLISH SUMMARY…

Portion of earth sinks atop Chamundi hills due to incessant rains: District In-charge minister instructs for quick action

Mysuru, October 21, 2021 (www.justkannada.in): The cultural capital of the State Mysuru is witnessing incessant rains for the last few days. As a result, a portion of the earth sank atop the Chamundi hills.

Heavy rains lashed Mysuru city yesterday night, resulting in sinking of a portion of the earth on the road leading to the Nandi statue from the Chamundi hill. The incident has taken place near the ‘Welcome’ illumination as part of the Dasara Mahotsav. The Myusru City Police Commissioner Dr. Chandragupta has prohibited the movement of vehicles and people on the road.

Several roads were inundated in rainwater as rains lashed the city yesterday night, causing a lot of problems to the movement of vehicles. Two-wheelers were found sunk in the rainwater on Ashoka road and near the clock tower.

Mysuru District In-charge Minister has instructed the Deputy Commissioner to take measures to repair the portion of the earth and road that has sunk on the way to Chamundi hill.

Keywords: Chamundi hill/ Mysuru/ incessant rain/ earth sinks