ಜನರ ಕಣ್ಣೊರೆಸಲು, ತೋರ್ಪಡಿಕೆಗೆ ಎಸಿಬಿ ದಾಳಿ ಮಾಡಿದರೇ ಪ್ರಯೋಜನವಿಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಮಾರ್ಚ್,22,2202(www.justkannada.in):  ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಎಸಿಬಿ ಇಂದು ಮಧ್ಯವರ್ತಿಗಳು ಮತ್ತು ಏಜೆಂಟರನ್ನ ಟಾರ್ಗೆಟ್ ಮಾಡಿ ದಾಳಿ ನಡೆಸಿದೆ. ಈ ಮಧ್ಯೆ ಎಸಿಬಿ ದಾಳಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜನರ ಕಣ್ಣೊರೆಸಲಷ್ಟೆ ಎಸಿಬಿ ದಾಳಿ.  ಕೇವಲ ಜನರ ಕಣ್ಣೊರೆಸಲಷ್ಟೆ ದಾಳಿ ಸರಿಯಲ್ಲ.  ತೋರ್ಪಡಿಕೆಗೆ ದಾಳಿ ಮಾಡಿದರೇ ಪ್ರಯೋಜನ ಇಲ್ಲ. ಇತ್ತೀಚೆಗೆ ಎಸಿಬಿ ಅನೇಕ ಕಡೆ ದಾಳಿ ನಡೆಸಿದೆ.  ದಾಳಿ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆ ಬಗ್ಗೆ ಕಿಡಿಕಾರಿದ ಹೆಚ್.ಡಿ ಕುಮಾರಸ್ವಾಮಿ, ಜನರು ಇಂದು ಹಣವಂತರಾಗಿದ್ದಾರೆ.  ಜನರಿಗೆ ಈಗ ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ.  ಈಗ ಧರ್ಮದ ಅವಶ್ಯಕತೆ ಇದೆ. ಜನ ಎಷ್ಟೇ ಬೆಲೆ ಏರಿದರೂ ಕೊಡಲು ಸಿದ್ಧರಿದ್ದಾರೆ ಎಂದು ವ್ಯಂಗ್ಯವಾಗಿ ಬೇಸರ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ತಮಿಳುನಾಡಿನ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬದ್ಧತೆ ತೋರಿಸಬೇಕು. ನಮ್ಮ ನೀರನ್ನ ಪಡೆಯುವುದರಲ್ಲಿ ಅನ್ಯಾಯವಾಗಿದೆ. ಅದನ್ನ ರಾಜ್ಯ ಸರ್ಕಾರ ತ್ವರಿತ ಗತಿಯಲ್ಲಿ ಸರಿಪಡಿಸಬೇಕು ಎಂದರು.

Key words: hd kumaraswamy-ACB-raid