Wednesday, August 12, 2026

BDA Apartments

Home Cinema ಕಿಚ್ಚ ಸುದೀಪ್ ‘ಕನ್ನಡ ಕಲಾತಿಲಕ’! ದುಬೈ ಕನ್ನಡಿಗರಿಂದ ಪುರಸ್ಕಾರ

ಕಿಚ್ಚ ಸುದೀಪ್ ‘ಕನ್ನಡ ಕಲಾತಿಲಕ’! ದುಬೈ ಕನ್ನಡಿಗರಿಂದ ಪುರಸ್ಕಾರ

ಬೆಂಗಳೂರು, ಫೆಬ್ರವರಿ 06, 2021 (www.justkannada.in): 

ನಟ ಕಿಚ್ಚ ಸುದೀಪ್‌ಗೆ ‘ಕನ್ನಡ ಕಲಾತಿಲಕ’ ಬಿರುದು ನೀಡಿ ದುಬೈ ಕನ್ನಡಿಗರು ಗೌರವಿಸಿದ್ದಾರೆ.

ಹೌದು. ಭಾರತೀಯ ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಅನಿವಾಸಿ ಕನ್ನಡಿಗರು ಸುದೀಪ್ ಅವರನ್ನು ಗೌರವಿಸಿದ್ದಾರೆ.

ದುಬೈನಲ್ಲಿ ಅಭಿನಯ ಚಕ್ರವರ್ತಿಯನ್ನು ಭೇಟಿ ಮಾಡಿ ಅಭಿನಂದಿಸಿದ ಕನ್ನಡಿಗರು ‘ಕನ್ನಡದ ಕಲಾತಿಲಕ’ ಬಿರುದು ನೀಡಿದ್ದಾರೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳು ಈ ಗೌರವ ಸಲ್ಲಿಸಿವೆ.