Tuesday, August 11, 2026

BDA Apartments

Home Cinema ‘ರಾಮಾರ್ಜುನ’ ಮೆಚ್ಚಿ ಹೊಗಳಿದ ಆ್ಯಕ್ಸನ್ ಪ್ರಿನ್ಸ್ ಧ್ರುವ

‘ರಾಮಾರ್ಜುನ’ ಮೆಚ್ಚಿ ಹೊಗಳಿದ ಆ್ಯಕ್ಸನ್ ಪ್ರಿನ್ಸ್ ಧ್ರುವ

ಬೆಂಗಳೂರು, ಫೆಬ್ರವರಿ 06, 2021 (www.justkannada.in):

ಇತ್ತೀಚಿಗೆ ಬಿಡುಗಡೆಯಾದ ‘ರಾಮಾರ್ಜುನ’ ಚಿತ್ರವನ್ನು ನೋಡಿದ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನಿಶ್ ತೇಜೇಶ್ವರ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರಕ್ಕೆ 100 ಮಾರ್ಕ್ಸ್ ಕೊಟ್ಟಿದ್ದಾರೆ ಆ್ಯಕ್ಸನ್ ‍ಪ್ರಿನ್ಸ್.

ಅಂದಹಾಗೆ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿರುವ ರಾಮಾರ್ಜುನ ಎರಡನೇ ವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ರಾಮಾರ್ಜುನ ಎಂಬ ಅತ್ಯದ್ಭುತ ಸಿನಿಮಾ ನೋಡಿದೆ, ಕಥೆ ಬಹಳ ಚೆನ್ನಾಗಿದೆ. ದಯವಿಟ್ಟು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಧ್ರುವ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.