Sunday, October 25, 2026

Dasara Wishes

RSS ಸದಸ್ಯರು ಹಿಂದೂಗಳಲ್ಲ, ಬದಲಿಗೆ ಹಿಂದುತ್ವವಾದಿಗಳು- ಸಚಿವ ಯತೀಂದ್ರ ಸಿದ್ದರ...
Happy Dasara
Home Cinema ಯುವ ದಸರಾ: ‘ಸಿದ್ ಶ್ರೀರಾಮ್ ಕಾರ್ಯಕ್ರಮ’ ಅನಧಿಕೃತ ಲೈವ್ ಸ್ಟ್ರೀಮಿಂಗ್ ತೆಗೆದು ಹಾಕಲು ಸೂಚನೆ

ಯುವ ದಸರಾ: ‘ಸಿದ್ ಶ್ರೀರಾಮ್ ಕಾರ್ಯಕ್ರಮ’ ಅನಧಿಕೃತ ಲೈವ್ ಸ್ಟ್ರೀಮಿಂಗ್ ತೆಗೆದು ಹಾಕಲು ಸೂಚನೆ

ಯುವ ದಸರಾ: ‘ಸಿದ್ ಶ್ರೀರಾಮ್ ಕಾರ್ಯಕ್ರಮ’ ಅನಧಿಕೃತ ಲೈವ್ ಸ್ಟ್ರೀಮಿಂಗ್ ತೆಗೆದು ಹಾಕಲು ಸೂಚನೆ

ಮೈಸೂರು,ಅಕ್ಟೋಬರ್,25,2026 (www.justkannada.in):  ದಿನಾಂಕ 18-10-2026ರಂದು ಮೈಸೂರು ಯುವ ದಸರಾ 2026ರ ಅಂಗವಾಗಿ ಆಯೋಜಿಸಲಾಗಿದ್ದ  ಖ್ಯಾತ ಗಾಯಕ ಸಿದ್ ಶ್ರೀರಾಮ್ ಅವರ ಸಂಗೀತ ಕಾರ್ಯಕ್ರಮದ ಅನಧಿಕೃತ ಲೈವ್ ಸ್ಟ್ರೀಮಿಂಗ್ ತಕ್ಷಣವೇ ತೆಗೆದು ಹಾಕುವಂತೆ ಎಲ್ಲಾ ಮಾಧ್ಯಮ ಸಂಸ್ಥೆಗಳು, ಚಾನೆಲ್‌ ಗಳು ಹಾಗೂ ಡಿಜಿಟಲ್ ವೇದಿಕೆಗಳಿಗೆ  ಮೈಸೂರು ಯುವ ದಸರಾ ಉಪಸಮಿತಿ  ಸೂಚನೆ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ  ಮೈಸೂರು ಯುವ ದಸರಾ 2026 ಕಾರ್ಯಾಧ್ಯಕ್ಷ ಸೋಮ್ ಶೇಖರ್ ಜಿ.ಎಸ್. ಕಲಾವಿದರೊಂದಿಗಿನ ಒಪ್ಪಂದದ ಷರತ್ತುಗಳ ಪ್ರಕಾರ, ಸದರಿ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್‌ ಗೆ ಅನುಮತಿ ಇರುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದಾಗ್ಯೂ, ಕೆಲವು ಮಾಧ್ಯಮ ಚಾನೆಲ್‌ ಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಇನ್ನೂ ಲಭ್ಯವಿರುವುದು ಗಮನಕ್ಕೆ ಬಂದಿದೆ.ಯುವ ದಸರಾ: ‘ಸಿದ್ ಶ್ರೀರಾಮ್ ಕಾರ್ಯಕ್ರಮ’ ಅನಧಿಕೃತ ಲೈವ್ ಸ್ಟ್ರೀಮಿಂಗ್ ತೆಗೆದು ಹಾಕಲು ಸೂಚನೆ

ಆದ್ದರಿಂದ, ಸಂಬಂಧಪಟ್ಟ ಎಲ್ಲಾ ಮಾಧ್ಯಮ ಸಂಸ್ಥೆಗಳು, ಚಾನೆಲ್‌ ಗಳು ಹಾಗೂ ಡಿಜಿಟಲ್ ವೇದಿಕೆಗಳು ಸದರಿ ಕಾರ್ಯಕ್ರಮದ ಅನಧಿಕೃತ ಲೈವ್ ಸ್ಟ್ರೀಮಿಂಗ್ ಮತ್ತು ಅನುಮತಿಯಿಲ್ಲದೆ ಪ್ರಕಟಿಸಲಾದ ವಿಡಿಯೋಗಳನ್ನು ತಕ್ಷಣವೇ ತೆಗೆದುಹಾಕಬೇಕು ಹಾಗೂ ಮರುಪ್ರಸಾರವನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಿದ್ದಾರೆ.ಯುವ ದಸರಾ: ‘ಸಿದ್ ಶ್ರೀರಾಮ್ ಕಾರ್ಯಕ್ರಮ’ ಅನಧಿಕೃತ ಲೈವ್ ಸ್ಟ್ರೀಮಿಂಗ್ ತೆಗೆದು ಹಾಕಲು ಸೂಚನೆ

ಒಪ್ಪಂದದ ಷರತ್ತುಗಳ ಉಲ್ಲಂಘನೆ ಕಂಡುಬಂದಲ್ಲಿ, ಅನ್ವಯಿಸುವ ಕಾನೂನಿನ ಪ್ರಕಾರ ಸಂಬಂಧಪಟ್ಟ ಹಕ್ಕುದಾರರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿರುತ್ತಾರೆ. ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಂಡು ಸಹಕರಿಸುವಂತೆ ಮೈಸೂರು ಯುವ ದಸರಾ ಉಪಸಮಿತಿಯು ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ಮನವಿ ಮಾಡುತ್ತದೆ ಎಂದು ಸೋಮ್ ಶೇಖರ್ ಜಿ.ಎಸ್. ತಿಳಿಸದ್ದಾರೆ.

Yuva Dasara, Directive, remove,  live streaming, ‘Sid Sriram Program

English Summary
Title

Why Was Sid Sriram's Yuva Dasara Concert Cancelled & Live Stream Removed?

Short Description
The Mysuru Yuva Dasara Sub-committee has directed all media organizations, channels, and digital platforms to immediately remove any unauthorized live streams of the musical performance by renowned singer Sid Sriram, which was organized as part of Mysuru Yuva Dasara 2026 on October 18, 2026. Som Shekhar G.S., Working President of Mysuru Yuva Dasara 2026, stated in a release that it had already been clearly communicated—in accordance with the terms of the agreement with the artist—that live streaming of the event was not permitted. Nevertheless, it has come to their attention that live streams of the performance remain available on certain media channels and digital platforms.
Keywords
Yuva Dasara, Directive, remove, live streaming, ‘Sid Sriram Program